×
Ad

ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ : ಸ್ವಾಗತ ಸಮಿತಿ ರಚನೆ

Update: 2025-11-21 17:45 IST

ಮಂಗಳೂರು, ನ.21: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.14ರಂದು ಗುರುಪುರ ಕೈಕಂಬದ ಮೇಗಾ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಇತ್ತೀಚೆಗೆ ಗುರುಪುರ ಕೈಕಂಬದಲ್ಲಿ ನಡೆಯಿತು.

ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅವರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಅಂಗವಾಗಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಮಂಗಳೂರು ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ಸಮ್ಮೇಳನದ ಯಶಸ್ಸಿಗೆ ಸಹಕರಿಸಲು ಸುಮಾರು 50 ಮಂದಿ ಸದಸ್ಯರನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಬ್ಯಾರಿ ಅಕಾಡಮಿಯ ಸದಸ್ಯ ಬಿ.ಎಸ್.ಮುಹಮ್ಮದ್ ಮತ್ತು ಕಾರ್ಯಕ್ರಮದ ಸದಸ್ಯ ಸಂಚಾಲಕ ತಾಜುದ್ದೀನ್ ಅಮ್ಮುಂಜೆ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಹಾಜಿ ಎಂ.ಎಚ್.ಮೊಹಿದಿನ್ ಅಡ್ಡೂರು, ಅಧ್ಯಕ್ಷರಾಗಿ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು, ಉಪಾಧ್ಯಕ್ಷರಾಗಿ ಎಂ.ಜಿ. ಶಾಹುಲ್ ಹಮೀದ್ ಗುರುಪುರ, ಸಲೀಂ ಹಂಡೇಲ್, ದಾವೂದ್ ಬಂಗ್ಲಗುಡ್ಡೆ, ಉಸ್ಮಾನ್ ಹಾಜಿ ಏರ್ ಇಂಡಿಯಾ, ಅಬ್ದುಲ್ ಸಲಾಂ ಬೂಟ್ ಬಝಾರ್, ಪ್ರಧಾನ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಬಜ್ಪೆ, ಕಾರ್ಯದರ್ಶಿಗಳಾಗಿ ಶಂಸುದ್ದೀನ್‌ ಮಡಿಕೇರಿ ಎಂ.ಡಿ. ನವಾಝ್, ಅಬ್ದುಲ್ ಜಲೀಲ್ ಅರಳ, ಇಸ್ಮಾಯಿಲ್ ಬಶೀರ್, ಬಿ.ಎಚ್. ಮುಹಮ್ಮದ್ ಅಶ್ರಫ್ ಬಾಳಿಕೆ, ಖಲಂದರ್ ಬೀವಿ ಕೈಕಂಬ, ಝಿಯಾನಾ ಬಜ್ಪೆ, ಅಬ್ದುಲ್ ರಹ್ಮಾನ್ ಎಡಪದವು, ಅಶ್ರಫ್ ಬಜ್ಪೆ, ಅಬ್ದುಲ್ ರಝಾಕ್ ಮರ್ಕಝ್, ಎಸ್.ಎಂ. ಅಝೀಝ್ ಕಂದಾವರ, ಹಸನಬ್ಬ ಎಡಪದವು ಹಾಗೂ ಗೌರವ ಸಲಹೆಗಾರರಾಗಿ ಅಲಿ ಅಬ್ಬಾಸ್ ಕೈಕಂಬ, ಎಂ.ಜಿ. ಮುಹಮ್ಮದ್ ಹಾಜಿ ತೋಡಾರ್, ಮಾಮು ಮನೇಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News