×
Ad

ಮಂಗಳೂರು | ಕದ್ರಿ ಮಲ್ಲಿಕಟ್ಟೆಯಲ್ಲಿ ಎಆರ್‌ಎಂ ಕಿಯಾ ಶೋರೂಂ ಶುಭಾರಂಭ

Update: 2025-11-26 19:27 IST

ಮಂಗಳೂರು, ನ.26: ಕದ್ರಿ ಸಿಟಿ ಆಸ್ಪತ್ರೆ ಬಳಿಯಿಂದ ಸ್ಥಳಾಂತರಗೊಂಡಿರುವ ಎಆರ್‌ಎಂ ಕಿಯಾ ಮೋಟಾರ್ಸ್‌ ಸಂಸ್ಥೆಯ ಶೋ ರೂಂ ಕದ್ರಿಯ ಮಲ್ಲಿಕಟ್ಟೆಯ ಕರುಣಾ ಪ್ರಭಾ ಕಾಂಪ್ಲೆಕ್ಸ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬುಧವಾರ ಶುಭಾರಂಭಗೊಂಡಿತು.

ಎಆರ್‌ಎಂ ಮೋಟಾರ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ಕಿಯಾ ಇಂಡಿಯಾದ ಸ್ಥಳೀಯ ವ್ಯವಸ್ಥಾಪಕ(ಮಾರುಕಟ್ಟೆ) ಕಿರಣ್ ಬಂಗಾರಿಮಠ ಉದ್ಘಾಟಿಸಿದರು.

ಅತಿಥಿಗಳಾಗಿ ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಭಾಸ್ಕರ ಶೆಟ್ಟಿ, ಕರುಣಾ ಇನ್ಫ್ರಾ ಪ್ರಾಪರ್ಟಿಸ್ ಪ್ರೈ ಲಿಮಿಟೆಡ್‌ನ ಆಡಳಿತ ನಿರ್ದೇಶಕರು ಕರುಣಾಕರನ್, ಕಟ್ಟಡದ ಮಾಲಕ ಪ್ರಕಾಶ್ ಉಡುಪಿ, ಎಆರ್‌ಎಂ ಕಿಯಾದ ಆಡಳಿತ ನಿರ್ದೇಶಕ ಆರೂರು ಗಣೇಶ್ ರಾವ್, ಮಾರುಕಟ್ಟೆ ನಿರ್ದೇಶಕ ವರುಣ್ ರಾವ್, ಸೇಲ್ಸ್ ಆ್ಯಂಡ್ ಎಚ್ ಆರ್ ನಿರ್ದೇಶಕ ಆರೂರು ವಿಕ್ರಮ್ ರಾವ್, ಹಿರಿಯ ಉಪಾಧ್ಯಕ್ಷ ಪ್ರದೀಪ್ ರೈ., ಜನರಲ್ ಮ್ಯಾನೇಜರ್ -ಸೇಲ್ಸ್ ನಿತಿನ್ ಕೃಷ್ಣ, ಜನರಲ್ ಮ್ಯಾನೇಜರ್ -ಸರ್ವಿಸ್ ಶಶಿಕುಮಾರ್ ಉಡುಪಿ, ಎಜಿಎಂ (VAS) ಕನಕ್ ಕುಮಾರ್, ಕ್ಲಸ್ಟರ್ ಹೆಡ್ ಹರೀಶ್ ರಾವ್, ಸೇಲ್ಸ್ ಮ್ಯಾನೇಜರ್ ಜಯಪ್ರಕಾಶ್ ಉಪಸ್ಥಿತರಿದ್ದರು.

ಡಿಂಪಲ್ ಸಾಲ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಎಆರ್‌ಎಂ ಕಿಯಾ ಶೋರೂಂನಲ್ಲಿ ಲಭ್ಯ ಸೌಲಭ್ಯಗಳು :

► ಸೆಲ್ಟೋಸ್ ,ಸೋನೆಟ್ , ಕೇರೆನ್ಸ್ ಕ್ಲಾವಿಸ್, ಸಿರೋಸ್, ಕಾರ್ನಿವಲ್ ಕಾರುಗಳು ಲಭ್ಯವಿದೆ.

► ಹಳೆಯ ಕಾರನ್ನು ಬದಲಾಯಿಸಿ ಹೊಸ ಕಿಯಾ ಕಾರು ಖರೀದಿಸಿದರೆ ಉತ್ತಮ ವಿನಿಮಯ ಬೋನಸ್ ಪಡೆಯಬಹುದು.

► ಬ್ಯಾಂಕ್ ಸಾಲ ಸೌಲಭ್ಯಗಳು , ಗ್ರಾಹಕರಿಗೆ ವಿಶೇಷ ರಿಯಾಯಿತಿ, ವಿಮೆ ರಿಯಾಯತಿ ಸೌಲಭ್ಯಗಳು ಸುಲಭವಾಗಿ ದೊರೆಯಲಿದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News