×
Ad

ಮಂಗಳೂರು: ಮೇ 25ರಂದು ಉಚಿತ ಕಿವಿ ತಪಾಸಣೆ ಶಿಬಿರ

Update: 2025-05-20 14:15 IST

ಮಂಗಳೂರು, ಮೇ 20: ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಇದರ ನೇತೃತ್ವದಲ್ಲಿ ಬೆಸೆಂಟ್ ಸಮೂಹ ಸಂಸ್ಥೆ ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಭಾಗಿತ್ವದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಮೇ 25ರಂದು ಬೆಳಗ್ಗೆ 9ಕ್ಕೆ ಕೊಡಿಯಾಲ್‌ಬೈಲ್‌ನ ಬೆಸೆಂಟ್ ಮಹಿಳಾ ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಮಾಜಿ ಗವರ್ನರ್ ಡಾ.ಬಿ.ದೇವದಾಸ ರೈ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್ ಮಲ್ಪೆ ಅವರು ಶ್ರವಣದ ಯಂತ್ರಕ್ಕೆ ಆಗುವ ವೆಚ್ಚದ ಶೇ.40 ಮೊತ್ತವನ್ನು ಭರಿಸಲಾಗುತ್ತಿದ್ದು, ರೋಗಿಗಳು ಇವರ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದರು.

ಈ ಶಿಬಿರದಲ್ಲಿ ಆಧುನಿಕ ತಂತ್ರಜ್ಞಾನದಿಂದ ಲಭ್ಯವಿರುವ ಪರೀಕ್ಷಾ ಉಪಕರಣಗಳು ಬಳಸಲಾಗುತ್ತಿದ್ದುಘಿ, ಜರ್ಮನ್ ತಯಾರಿಕೆ ಕಂಪನಿಯ ಕಿವಿ ಯಂತ್ರಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದ್ದುಘಿ, ಈ ಕಿವಿ ಯಂತ್ರಗಳಿಗೆ 2 ವರ್ಷಗಳ ಅಂತರರಾಷ್ಟ್ರೀಯ ವಾರಂಟಿ ಸಹ ಇರುತ್ತದೆ. ಇದಕ್ಕೆ ನೋಂದಣಿ ಕಡ್ಡಾಯವಾಗಿ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕು. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹಿಂದಿನ ಶ್ರವಣ ಪರೀಕ್ಷೆ ವರದಿಯನ್ನು ತರಬೇಕು. ಮೊದಲು ನೋಂದಣಿ 40 ಮಂದಿಗೆ ಈ ಸೌಲಭ್ಯ ಸಿಗಲಿದೆ ಎಂದರು.

ಈ ಸಂದರ್ಭ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೊ.ಬ್ರಾಯನ್ ಪಿಂಟೋ, ನಿಯೋಜಿತ ಅಧ್ಯಕ್ಷ ರೊ.ಭಾಸ್ಕರ ರೈ ಕಟ್ಟ, ರೋಟರಿ ಸಂಸ್ಥೆಯ ಸಮುದಾಯ ಯೋಜನೆಗಳ ನಿರ್ದೇಶಕ ರೊ. ಜಾಕ್ಸನ್ ಸಲ್ಡಾನ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News