×
Ad

ಮಂಗಳೂರು| ತೊಕ್ಕೊಟ್ಟುವಿನಲ್ಲಿ ಹಮ್ದ್ ಫುಡ್ಸ್ ನ ಮೂರನೇ ಮಳಿಗೆ ಉದ್ಘಾಟನೆ; ಮೂರು ಹೊಸ ಉತ್ಪನ್ನಗಳ ಬಿಡುಗಡೆ

Update: 2025-06-02 23:11 IST

ಮಂಗಳೂರು: ಹಮ್ದ್ ಫುಡ್ಸ್ ನ ಮೂರನೇ ಮಳಿಗೆ, ಹಮ್ದ್ ಹೋಂ ಸ್ಟೋರ್ ಅನ್ನು ಸೋಮವಾರ ತೊಕ್ಕೊಟ್ಟುವಿನಲ್ಲಿ ಸ್ತ್ರೀರೋಗತಜ್ಞೆ ಮತ್ತು ಪ್ರಸೂತಿ ತಜ್ಞೆ ಡಾ. ಸಾರಾ ನೌಶಾದ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸುಹಾಸಿನಿ ಬಬ್ಬುಕಟ್ಟೆ, ಅಬಿದಾ ಶಾಫಿ, ಫಾತಿಮಾ ಮಹ್ರೂನ್, ಝರೀನಾ ಬೇಗಂ, ರಮ್ಲತ್, ಜೆಸಿಂತಾ, ಸಪ್ನಾ ಹರೀಶ್, ಡಾ. ಉಮ್ಮೆ ಅಮ್ರಾ, ಶಹಬಾಝ್, ಅನಿಶಾ ಮತ್ತು ಮುಮ್ತಾಝ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ನೈಸರ್ಗಿಕ ಆಹಾರ ಉತ್ಪನ್ನಗಳ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಮ್ದ್ ಫುಡ್ಸ್ ನೈಸರ್ಗಿಕ ಪದಾರ್ಥಗಳೊಂದಿಗೆ ತಯಾರಿಸಲಾದ ಮೂರು ಹೊಸ ಉತ್ಪನ್ನಗಳಾದ ಟೊಮೆಟೊ-ಈರುಳ್ಳಿ ಪೇಸ್ಟ್, ಚಿಕನ್ ಸ್ಟ್ಯೂ ಮಸಾಲ ಮತ್ತು ಮರ್ವಾಯ್ ಸುಕ್ಕಾ ಮಸಾಲ ಮಿಕ್ಸ್ ಅನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು.

ತೊಕ್ಕೊಟ್ಟುವಿನ ನೂತನ ಮಳಿಗೆಯಲ್ಲಿ 150 ಕ್ಕೂ ಹೆಚ್ಚು ನೈಸರ್ಗಿಕ, ಸಾವಯವ ಆಹಾರ ಮತ್ತು ವೈಯಕ್ತಿಕ ಬಳಕೆಯ ಉತ್ಪನ್ನಗಳು ಲಭ್ಯವಿದೆ. ಯಾವುದೇ ಉತ್ಪನ್ನಗಳಲ್ಲಿ ಕೃತಕ ಬಣ್ಣಗಳು ಮತ್ತು ಹಾನಿಕಾರಕ ಸಂರಕ್ಷಕಗಳನ್ನು ಬಳಸದಿರುವುದರಿಂದ ಮಸಾಲೆ ಮಿಶ್ರಣಗಳಿಂದ ಹಿಡಿದು ಫ್ರೋಝನ್ ಉತ್ಪನ್ನಗಳವರೆಗೆ ಹಮ್ಡ್ ಫುಡ್ಸ್ ಭಾರತದಾದ್ಯಂತ ಗ್ರಾಹಕರ ವಿಶ್ವಾಸ ಗಳಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಮ್ದ್ ಫುಡ್ಸ್‌ನ ಸಹ-ಸಂಸ್ಥಾಪಕಿ ಮರಿಯಮ್ ಶಾಹಿರಾ, “ ಗ್ರಾಹಕರಿಗೆ ಅನುಕೂಲವಾಗಲು, ಅವರ ಸಮಯವನ್ನು ಉಳಿಸಲು ನಮ್ಮ ಉತ್ಪನ್ನಗಳು ಸಹಕಾರಿ ಯಾಗಲಿದೆ. ಫಳ್ನೀರ್ ಮತ್ತು ಕೃಷ್ಣಾಪುರದಲ್ಲಿನ ಮಳಿಗೆಗಳ ಯಶಸ್ಸಿನ ನಂತರ ಹೆಚ್ಚಿನ ಯೋಜನೆ ಗಳೊಂದಿಗೆ ತೊಕ್ಕೊಟ್ಟು ಮಳಿಗೆಯನ್ನು ಪ್ರಾರಂಭಿಸಲಾಗಿದೆ”, ಎಂದರು.

"ಇಂದಿನ ವೇಗದ ಜಗತ್ತಿನಲ್ಲಿ, ಅನೇಕ ಜನರಿಗೆ ಮನೆಯಲ್ಲಿ ಆರೋಗ್ಯಕರ ಆಹಾರ ತಯಾರಿಸಲು ಸಮಯವಿಲ್ಲ. ಹಲವರು ಹೊರಗಿನ ಆಹಾರವನ್ನು ಅವಲಂಭಿಸುತ್ತಿದ್ದಾರೆ. ಅವರಿಗೆ ಆರೋಗ್ಯಕರ ಆಹಾರ ಸಿಗುತ್ತಿಲ್ಲ. ಅದಕ್ಕಾಗಿಯೇ ಹಮ್ದ್ ದೈನಂದಿನ ಮತ್ತು ವಿಶೇಷ ಆಹಾರ ತಯಾರಿಕೆಯನ್ನು ಸುಲಭಗೊ ಳಿಸುವ ನೈಸರ್ಗಿಕ, ಬಳಸಲು ಸಿದ್ಧ ಉತ್ಪನ್ನಗಳನ್ನು ನೀಡಲು ಬದ್ಧವಾಗಿದೆ. ನಮ್ಮ ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಉಳ್ಳಾಲ, ಉಚ್ಚಿಲ, ತಲಪಾಡಿ, ಕೆ ಸಿ ರೋಡ್, ಬಬ್ಬುಕಟ್ಟೆ, ದೇರಳಕಟ್ಟೆ ಮತ್ತು ಅದರಾಚೆಗಿನ ಪ್ರದೇಶಗಳ ಬೇಡಿಕೆಗಳನ್ನು ಪೂರೈಸಲು ನಾವು ತೊಕ್ಕೊಟ್ಟುವಿನಲ್ಲಿ ನಮ್ಮ ಹೊಸ ಮಳಿಗೆಯನ್ನು ತೆರೆದಿದ್ದೇವೆ", ಎಂದು ಹಮ್ದ್ ಫುಡ್ಸ್ ಸಂಸ್ಥಾಪಕಿ ಶಾಹಿದಾ ಎ. ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News