ಮಿತ್ತಬೈಲ್: ರಕ್ತದಾನ ಶಿಬಿರ
ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಶಾಂತಿಅಂಗಡಿ ಶಾಖೆಯ ಜಂಟಿ ಆಶ್ರಯದಲ್ಲಿ, ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ದ.ಕ ವೆಸ್ಟ್ ಜಿಲ್ಲೆ ಮತ್ತು ರಕ್ತನಿಧಿ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಶಾಂತಿಅಂಗಡಿಯ ಮರ್ಹೂಂ ಶೈಖುನಾ ಮಿತ್ತಬೈಲ್ ಉಸ್ತಾದ್ ಹೌಸ್ ನಲ್ಲಿ ಭಾನುವಾರ ನಡೆಯಿತು.
ಎಸ್ಕೆಎಸ್ಸೆಸ್ಸೆಫ್ ಶಾಂತಿಅಂಗಡಿ ಶಾಖೆಯ ದಶಮಾನೋತ್ಸವದ ಪ್ರಚಾರ್ಥ ಹಾಗೂ ಸಮಸ್ತ 100ನೇ ವಾರ್ಷಿಕೋತ್ಸವದ ಪ್ರಯುಕ್ತ ಮತ್ತು ಮರ್ಹೂಂ ರಹಿಮಾನ್ ಕೊಳತ್ತಮಜಲ್ ಅವರ ಸ್ಮರಣಾರ್ಥ ನಡೆದ ಈ ಶಿಬಿರವನ್ನು ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಅಬ್ಬಾಸ್ ಫೈಝಿ ಉದ್ಘಾಟಿಸಿದರು.
ಮಿತ್ತಬೈಲ್ ಜಮಾಅತ್ ಅಧ್ಯಕ್ಷ ಮುಹಮ್ಮದ್ ಅದ್ದೇಡಿ ಅಧ್ಯಕ್ಷತೆ ವಹಿಸಿದ್ದರು, ಮಿತ್ತಬೈಲ್ ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ದುವಾ ನೆರವೇರಿಸಿದರು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೌಲುಲ್ ಹುದಾ ಮದರಸದ ಪ್ರಾಂಶುಪಾಲ ಮುಹ್ಸೀನ್ ಫೈಝಿ, ಶಾಂತಿಅಂಗಡಿ ಶಾಖೆಯ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ರಕ್ತದಾನಿ ಬಳಗ ಜಿಲ್ಲಾ ಉಸ್ತುವಾರಿ ಮುಸ್ತಫಾ ಕಟ್ಟಡದಪಡ್ಪು, ಬಂಟ್ವಾಳ ಪುರಸಭೆಯ ಸದಸ್ಯರಾದ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಲೋಲಾಕ್ಷ, ಮಿತ್ತಬೈಲ್ ಜಮಾಅತ್ ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಜೊತೆ ಕಾರ್ಯದರ್ಶಿ ಇಕ್ಬಾಲ್ ನಂದರಬೆಟ್ಟು, ಪರ್ಲಿಯ ಮಸೀದಿ ಅಧ್ಯಕ್ಷ ಎ.ಕೆ. ಇಕ್ಬಾಲ್, ನಂದರಬೆಟ್ಟು ಮಸೀದಿ ಅಧ್ಯಕ್ಷ ಮುಹಮ್ಮದ್ ಸಗೀರ್, ಇಮ್ದಾದ್ ಹೆಲ್ಪ್ ಲೈನ್ ಶಾಂತಿಅಂಗಡಿ ಅಧ್ಯಕ್ಷ ಮುಸ್ತಫಾ ಪಿ.ಬಿ, ಎಂ.ವೈ.ಎ. ಶಾಂತಿಅಂಗಡಿ ಅಧ್ಯಕ್ಷ ಮುಸ್ತಫಾ, ಎನ್.ಎಂ.ಎಸ್. ಶಾಂತಿಅಂಗಡಿ ಅಧ್ಯಕ್ಷ ಇಸ್ಮಾಯಿಲ್ ಪಲ್ಲ, ಶಾಂತಿಅಂಗಡಿ ಶಾಖೆಯ ಕಾರ್ಯದರ್ಶಿ ಇಮ್ರಾನ್ ಶಾಂತಿಅಂಗಡಿ, ಉಪಾಧ್ಯಕ್ಷರಾದ ಹನೀಫ್ ಶಾಂತಿಅಂಗಡಿ ಹಾಗೂ ಇಮ್ರಾನ್ ತಲಪಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಪವಿತ್ರ ಉಮ್ರಾ ಯಾತ್ರೆಗೆ ಹೊರಟ ಮಿತ್ತಬೈಲ್ ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ಹಾಗೂ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಹಾಗೂ ಶಾಖೆಯ ಸಹಚಾರಿ ಚೇರ್ಮನ್ ಶಾಕೀರ್ ಮಿತ್ತಬೈಲ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ಕೋಶಾಧಿಕಾರಿ ಅಶ್ರಫ್ ಶಾಂತಿಅಂಗಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.