×
Ad

ಮೂಡುಬಿದಿರೆ : ಅಕ್ರಮ ಗೋಮಾಂಸ ಮಾರಾಟ ಪ್ರದೇಶಕ್ಕೆ ಪೊಲೀಸ್ ದಾಳಿ

ಆರೋಪಿಗಳು ಪರಾರಿ; ಮಾಂಸ, ಪರಿಕರಗಳು ವಶಕ್ಕೆ

Update: 2025-10-07 12:40 IST

ಮೂಡುಬಿದಿರೆ: ಇಲ್ಲಿನ ಗಂಟಾಲ್ ಕಟ್ಟೆಯ ಜಲೀಲ್ ಎಂಬವರ ಮನೆ ಹಿಂಭಾಗದ ಗುಡ್ಡೆಯ ಕಾಡಿನಲ್ಲಿ ಜಾನುವಾರು ಕಡಿದು ಮಾಂಸ ಮಾಡುತ್ತಿರುವ ಆರೋಪದ ಮೇಲೆ ಮೂಡುಬಿದಿರೆ ಪೊಲೀಸರು ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ದಾಳಿ ನಡೆಸಿ ಮಾಂಸ ಸಹಿತ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ನಡೆಸಿ 50ಕೆ.ಜಿ. ಮಾಂಸ ಹಾಗೂ, ಕದ್ದು ತಂದಿದ್ದಾರೆನ್ನಲಾದ 3 ದನಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ಒಪ್ಪಿಸಲಾಗಿದೆ.

ಆರೋಪಿಗಳಾದ ಜಲೀಲ್ ಕಲ್ಲಬೆಟ್ಟು, ಸಾಹಿಲ್, ಆತನ ಪುತ್ರ ಸೊಹೇಲ್, ಕುದ್ರೋಳಿ ನಿವಾಸಿ ಮೊಹಮ್ಮದ್ ಅಶ್ರಫ್ ಪೊಲೀಸ್ ದಾಳಿ ಸಂದರ್ಭ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News