ಮುಲ್ಕಿ | ಅಂಗರಗುಡ್ಡೆ ಜುಮಾ ಮಸೀದಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಮುಲ್ಕಿ : ಇಲ್ಲಿನ ಅಲ್ ಮದ್ರಸತುಲ್ ಬದ್ರಿಯಾ ಜುಮಾ ಮಸೀದಿ ಅಂಗರಗುಡ್ಡೆ ಕೆಂಚನಕೆರೆ ಹಾಗೂ ಎಸ್ಕೆಎಸ್ಬಿವಿ ಅಂಗರಗುಡ್ಡೆ ಇದರ ವತಿಯಿಂದ 24-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದಿರುವ ಜಮಾಅತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಮದರಸದಲ್ಲಿ ಮಂಗಳವಾರ ನಡೆಯಿತು.
ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಮುಲ್ಕಿ ಮೆಡ್ಲಿನ್ ಕಾಲೇಜಿನ ಅಸ್ಮಾ ಖತೀಜಾ 560 (ಶೇ. 93), ಮೂಳೂರು ಅಲ್ ಇಹ್ಸಾನ್ ಕಾಲೇಜಿನ ಹಫೀಝಾ 576 (ಶೇ.96), ಪಾಂಪೈ ಕಾಲೇಜಿನ ಮುಹಮ್ಮದ್ ಸಾದಾತ್ 543 ( ಶೇ.90) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಾಲಿನ ಎಸೆಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಮೂಳೂರು ಅಲ್ ಇಹ್ಸಾನ್ ಕಾಲೇಜಿನ ವಿದ್ಯಾರ್ಥಿನಿ ಹನ್ವೀಝಾ 555 (ಶೇ.88.8), ಮೂಳೂರು ಅಲ್ ಇಹ್ಸಾನ್ ಕಾಲೇಜಿನ ಅಲೀಮ ಸಶ್ವಾ 550 (ಶೇ.88), ಮುಲ್ಕಿ ಕಿಲ್ಪಾಡಿಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಅಲೀಝಾ ಖತೀಜ ಅಝೀಝ್ 540 ( ಶೇ.86.4) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಾರಂಭವನ್ನು ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರು ಹಾಗೂ ಮುದರ್ರಿಸ್ ಜಾಬಿರ್ ಫೈಝಿ ಉದ್ಘಾಟಿಸಿದರು. ಜುಮಾ ಮಸೀದಿಯ ಅಧ್ಯಕ್ಷ ನಿಸಾರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಮಯ್ಯದ್ದಿ ಪುನರೂರು, ಕೋಶಾಧಿಕಾರಿ ಯಾಸೀರ್, ಜೊತೆ ಕಾರ್ಯದರ್ಶಿ ಇಕ್ಬಾಲ್ ಎನ್.ಬಿ.ಎಂ., ಸದಸ್ಯರಾದ ಅಬ್ದುಲ್ ಖಾದರ್, ಮುಬಾರಕ್ ಪುನರೂರು, ಹಸೈನಾರ್ ಮೊದಲಾದವರು ಉಪಸ್ಥಿತರಿದ್ದರು.