×
Ad

ಮುಲ್ಕಿ: ಮೀನು ವ್ಯಾಪಾರ ಮಾಡುತ್ತಿದ್ದ ವೇಳೆ ಕುಸಿದುಬಿದ್ದು ವ್ಯಾಪಾರಿ ಮೃತ್ಯು

Update: 2024-07-24 11:40 IST

ಹಳೆಯಂಗಡಿ, ಜು.24: ಮೀನು ವ್ಯಾಪಾರ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವ್ಯಾಪಾರಿ ಮೃತಪಟ್ಟಿರುವ ಘಟನೆ ಮುಲ್ಕಿ ತಾಲೂಕಿನ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಪಕ್ಷಿಕೆರೆ ಹೊಸಕಾಡು ನಿವಾಸಿ ಅಬ್ದುಲ್ ಖಾದರ್ ಮೃತಪಟ್ಟವರು.

ಎಂದಿನಂತೆ ಇಂದು ಬೆಳಗ್ಗಿನ ಜಾವ ಮಲ್ಪೆಗೆ ಹೋಗಿ ಮೀನು ತಂದಿದ್ದ ಅಬ್ದುಲ್ ಖಾದರ್, ದ್ವಿಚಕ್ರ ವಾಹನದಲ್ಲಿ ಮನೆಮನೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಅವರು ಬೆಳಗ್ಗೆ 9ರ ವೇಳೆ ಮನೆ ಸಮೀಪದಲ್ಲೇ ಮೀನು ಮಾರುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದರೆನ್ನಲಾಗಿದೆ.

ತಕ್ಷಣ ಅವರ ಸಹೋದರರಿಗೆ ಮಾಹಿತಿ ನೀಡಿ ಬಳಿಕ ಮುಕ್ಕದ ಖಾಸಗಿ ಅಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ತಿಳಿದು ಬಂದಿದೆ.

ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಮಗ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News