ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪರ ಹೆಸರು ಇಟ್ಟಿರುವುದು ಕುಲಾಲ ಸಮಾಜಕ್ಕೆ ಸಂದ ಗೌರವ: ಮಾಣಿಲಶ್ರೀ
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ -ಕುದ್ಮುಲ್ ರಂಗರಾವ್ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನು ಇಟ್ಟಿರುವುದು ಕುಲಾಲ ಸಮಾಜಕ್ಕೆ ಸಂದ ಗೌರವ ಎಂದು ಶ್ರೀ ಧಾಮ ಮಾಣಿಲಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದ್ದಾರೆ.
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವತಿಯಿಂದ ನಾಸಿಕ್ ಬಿ.ಎಚ್.ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ ನಾಮಕರಣದ ನಿಮಿತ್ತ ಹಮ್ಮಿಕೊಂಡ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾ ಡುತ್ತಿದ್ದರು.
ಅಮ್ಮೆಂಬಳ ಬಾಳಪ್ಪ ಸಹಕಾರಿ ರಂಗಕ್ಕೆ ನೀಡಿದ ಕೊಡುಗೆಯೂ ಮಹತ್ವದ್ದಾಗಿದೆ. ನಾವು ಎಲ್ಲರ ಜೊತೆ ಪರಸ್ಪರ ಉತ್ತಮ ಸಂಬಂಧ ಹೊಂದುತ್ತಾ ನಮ್ಮ ಸಮಾಜದ ಅಭಿವೃದ್ಧಿ ಗೆ ಶ್ರಮಿಸೋಣ ಎಂದರು.
ಸಮಾರಂಭದಲ್ಲಿ ಮಾಜಿ ಮೇಯರ್ ದಿವಾಕರ ಪಾಂಡೇಶ್ವರವರನ್ನು ಡಾ.ಅಮ್ಮೆಂಬಳ ಬಾಳಪ್ಪ ಹೆಸರನ್ನು ರಸ್ತೆ ಗೆ ಇಡಲು ಮನಪಾ ನಿರ್ಣಯ ಕೈ ಗೊಂಡ ಹಿನ್ನೆಲೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಲಿತ ಮುಖಂಡ ಎಮ್.ದೇವದಾಸ್ ಸಮಾರಂಭ ವನ್ನುದ್ದೇಶಿಸಿ ಮಾತನಾಡುತ್ತಾ, ಮಹಾತ್ಮ ಗಾಂಧಿಯವರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ಅವರು 1992ರ ನಂತರ ಸೌಹಾರ್ದ ಕ್ಕಾಗಿ ಮಾನವ ಸರಪಳಿ ಗಾಗಿ ನಮ್ಮೊಂದಿಗೆ ಜೊತೆಯಾದವರು ಅವರ ಹೆಸರು ರೈಲ್ವೆ ನಿಲ್ದಾಣಕ್ಕೆ ಮಾಡುವುದು ಸೂಕ್ತ ಎಂದರು.
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಸ್ವಾಗತಿಸುತ್ತಾ, ಡಾ.ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನು ರಸ್ತೆ ಇಡಬೇಕಬ ಬಹುದಿನದ ಕನಸು ನನಸಾಗಿದೆ.ಅವರ ತ್ಯಾಗ ,ನಿಸ್ವಾರ್ಥ ಸೇವೆಗೆ ದೊರೆಯಬೇಕಾದ ಮನ್ನಣೆ ಸೂಕ್ತ ಕಾಲದಲ್ಲಿ ದೊರೆಯಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ಈಗಲಾದರು ಅವರ ಹೆಸರನ್ನು ರಸ್ತೆಗೆ ಇಡಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ನಿವೃತ್ತ ಕಮಾಡೆಂಟ್ ಚಂದಪ್ಪ ಮೂಲ್ಯ.ಮುಡಿಪು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ , ಪುಂಡರೀಕಾಕ್ಷ ,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಸ್ತೂರಿ ಪಂಜ,ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಕುಲಶೇಖರ ವೀರ ನಾರಾಯಣ ಸೇವಾಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್,ಮೆಸ್ಕಾಂ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಕುಲಾಲ್ ,ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ ಪುರುಷೋತ್ತಮ ಕುಲಾಲ್, ದಿವಾಕರ ಪಾಂಡೇಶ್ವರ,ಸುಂದರ ಕುಲಾಲ್ , ರೂಪಾ ಡಿ ಬಂಗೇರಾ, ಸುರೇಶ್ ಸಾಲ್ಯಾನ್, ಸದಾಶಿವ ಕುಲಾಲ್ ಮೊದಲಾ ದವರು ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಸ್ವಾಗತಿಸಿದರು. ಪುತ್ತೂರು ನವೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.