ದಾರುನ್ನೂರ್ ದಶಮಾನೋತ್ಸವ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ
ಮೂಡುಬಿದಿರೆ, ಡಿ.11: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಜಮೀಯ್ಯತುಲ್ ಫಲಾಹ್ ಮಂಗಳೂರು ಮತ್ತು ಮೂಡುಬಿದಿರೆ ತಾಲೂಕು ಘಟಕ ಹಾಗೂ ಯೆನೆಪೊಯ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ದಾರುನ್ನೂರ್ ಸಂಸ್ಥೆಯಲ್ಲಿ ‘ನಗುಮುಖ -ದಂತ ಸುಖ’ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
ದ.ಕ. ಜಿಲ್ಲಾ ಖಾಝಿ, ದಾರುನ್ನೂರ್ ಸಂಸ್ಥೆಯ ಅಧ್ಯಕ್ಷ ತ್ವಾಖಾ ಅಹ್ಮದ್ ಅಲ್ ಅಝ್ಹರಿ ದುಆ ನೆರವೇರಿಸಿದರು. ದಾರುನ್ನೂರ್ ದಶಮಾನೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಘಟಕದ ಅಧ್ಯಕ್ಷ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು.
ಕಾಶಿಪಟ್ಣ ಗ್ರಾಪಂ ಅಧ್ಯಕ್ಷ ಸತೀಶ್ ಕೆ, ಜಮೀಯ್ಯತುಲ್ ಫಲಾಹ ಮಂಗಳೂರು ಘಟಕದ ಅಧ್ಯಕ್ಷ ಮುಹಮ್ಮದ್ ಬಪ್ಪಳಿಗೆ, ಮೂಡುಬಿದಿರೆ ಘಟಕದ ಕೋಶಾಧಿಕಾರಿ ಸಲೀಂ ಹಂಡೇಲ್, ದಾರುನ್ನೂರ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಸಮದ್, ಸದಸ್ಯರಾದ ಎಂಜಿ ಮುಹಮ್ಮದ್ ತೋಡಾರ್, ಅಹ್ಮದ್ ಹುಸೈನ್ ಗಂಟಾಲ್ಕಟ್ಟೆ, ಅಝೀಝ್ ಮಾಲಿಕ್, ಎಫ್.ಎ. ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.
ದಾರುನ್ನೂರ್ ಸಂಸ್ಥೆಯ ಕೋಶಾಧಿಕಾರಿ ಉಸ್ಮಾನ್ ಏರ್ ಇಂಡಿಯಾ ಸ್ವಾಗತಿಸಿದರು. ಫಕೀರಬ್ಬ ಮಾಸ್ಟರ್ ವಂದಿಸಿದರು. ಜಮೀಯ್ಯತುಲ್ ಫಲಾಹ್ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಹಾಬ್ ಕಾರ್ಯಕ್ರಮ ನಿರೂಪಿಸಿದರು.