ದೇಶದ ಪ್ರಜೆಗಳಿಗೆ ನಿರಾಶೆಯ ಬಜೆಟ್: ಡಾ.ಮಂಜುನಾಥ ಭಂಡಾರಿ
ಮಂಗಳೂರು : ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗವನ್ನು ಸಂಪೂರ್ಣ ಕಡೆಗಣಿಸಲಾ ಗಿದೆ. ಆದಾಯ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. ವಿತ್ತ ಸಚಿವರು 55 ನಿಮಿಷಗಳ ಕಾಲ ಚುನಾವಣಾ ಭಾಷಣ ಮಾಡಿ ದರೇ ಹೊರತು ದೇಶದ ಅಭಿವೃದ್ಧಿ ದೃಷ್ಟಿಕೋನದಿಂದ ಯಾವುದೇ ಯೋಜನೆ ಪ್ರಕಟಿಸಿಲ್ಲ. ದೇಶದ ಆದಾಯ ಮೂಲವಾದ ಕೃಷಿ, ಉದ್ಯಮ, ಸೇವಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಬಹುನಿರೀಕ್ಷೆಯಿಂದ ಬಜೆಟ್‌ನ್ನು ಕಾಯುತ್ತಿದ್ದ ದೇಶವಾಸಿಗಳಿಗೆ ಕೇಂದ್ರ ಸರಕಾರ ನಿರಾಶೆ ಮೂಡಿಸಿದೆ.
-ಡಾ. ಮಂಜುನಾಥ ಭಂಡಾರಿ, ಶಾಸಕರು ವಿಧಾನ ಪರಿಷತ್, ಕರ್ನಾಟಕ ಸರಕಾರ
"ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರೀಕ್ಷೆಯಂತೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಗ್ರಾಮೀಣಾ ಭಿವೃದ್ಧಿಗೆ ಉತ್ತೇಜನ ನೀಡುವ ಬಜೆಟ್ ಮಂಡಿಸಿದರು. ಯೋಜನೆಗಳ ಸ್ಥಿರತೆ ಮತ್ತು ನಿರಂತರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಗಮನ ನೀಡಿದಂತಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಬೆಳೆಯಲು ಸಮರ್ಪಕ ಹಣಕಾಸು, ಸಂಬಂಧಿತ ತಂತ್ರಜ್ಞಾನಗಳು ಮತ್ತು ಸೂಕ್ತವಾದ ತರಬೇತಿ ಅಗತ್ಯ ಎಂದು ಸರಕಾರ ಒಪ್ಪಿಕೊಂಡಂತೆ ಕಾಣುತ್ತಿದೆ. ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸುವ ಯೋಜನೆಗಳು ಇಲ್ಲದಾಗಿದೆ".
-ಬಿ.ಎ.ನಝೀರ್, ಅಧ್ಯಕ್ಷರು ಸಿಪಿಎಂಟಿಎ
"ನಿರೀಕ್ಷೆಯಂತೆ ಈ ಬಜೆಟ್ ವೋಟ್ ಆನ್ ಅಕೌಂಟ್ ಆಗಿದೆ. ಯಾವುದೇ ಪ್ರಮುಖ ತೆರಿಗೆ ಬದಲಾವಣೆಗಳಿಲ್ಲ. ಆರ್ಥಿಕ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಕೆಲವು ಅಂಶಗಳು ಕರಾವಳಿ ಕರ್ನಾಟಕದ ಉದ್ಯಮ ಮತ್ತು ಆರ್ಥಿಕ ಅಭಿವೃದ್ಧಿ ಮೇಲೆ ಪರಿಣಾಮ ಸಾಧ್ಯತೆ ಕಂಡು ಬಂದಿದೆ".
-ಅನಂತೇಶ್ ವಿ ಪ್ರಭು
ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಗಳೂರು