ರಸ್ತೆಯಲ್ಲಿ ನಮಾಝ್: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಕ್ಕೆ ಎಸ್ಕೆಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಖಂಡನೆ
Update: 2024-05-29 12:32 IST
ಮಂಗಳೂರು, ಮೇ 29: ನಗರದ ಕಂಕನಾಡಿ ಮಸೀದಿಯಲ್ಲಿ ಶುಕ್ರವಾರ ಜಮಾ ನಮಾಝ್ ಗೆ ಸ್ಥಳಾವಕಾಶದ ಕೊರತೆ ಕಾರಣ ಅನಿವಾರ್ಯವಾಗಿ ರಸ್ತೆಯಲ್ಲಿ 5 ನಿಮಿಷ ನಮಾಝ್ ನಿರ್ವಹಿಸಿರುವುದನ್ನು ಮುಂದಿಟ್ಟು, ಕೋಮು ವಿಷಬೀಜ ಬಿತ್ತಲು ಕೆಲವು ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಪ್ರಯತ್ನಿಸುತ್ತಿವೆ. ಜಿಲ್ಲೆಯಲ್ಲಿ ಕೆಲವು ಧರ್ಮದ ಉತ್ಸವದ ಸಂದರ್ಭ ಕಿಲೋ ಮೀಟರ್ ದೂರದ ವರೆಗೆ ರಸ್ತೆ ತಡೆ ನಡೆಸಿದಾಗ ಮತ್ತು ಇತ್ತೀಚೆಗೆ ಮಂಗಳೂರು ರೈಲ್ವೆ ನಿಲ್ದಾಣ ದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಧಾರ್ಮಿಕ ಕಾರ್ಯಕ್ರಮ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಕರ್ನಾಟಕ ಸರಕಾರ ಮತ್ತು ಪೊಲೀಸ್ ಇಲಾಖೆಯ ದ್ವಿಮುಖ ನೀತಿ ಖಂಡನೀಯ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಹೇಳಿದೆ.
5 ನಿಮಿಷಗಳ ಪ್ರಾರ್ಥನೆ ವಿಚಾರವಾಗಿ ದಾಖಲಿಸಿದ ಸ್ವಯಂಪ್ರೇರಿತ ಪ್ರಕರಣವನ್ನು ಪೊಲೀಸ್ ಇಲಾಖೆ ಕೂಡಲೇ ಹಿಂಪಡೆಯಬೇಕು ಎಂದು ದ.ಕ ಈಸ್ಟ್ ಜಿಲ್ಲಾ ಸಮಿತಿ ಪ್ರಕಟನೆಯ ಮೂಲಕ ಒತ್ತಾಯಿಸಿದೆ.