×
Ad

ಮಂಗಳೂರು: ಮಹಿಳೆಯ ಅತ್ಯಾಚಾರ ಪ್ರಕರಣ; ಆರೋಪಿ ಸೆರೆ

Update: 2024-05-29 19:03 IST

ಆರೋಪಿ ಸುಜಿತ್

ಮಂಗಳೂರು, ಮೇ 29: ಮಹಿಳೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ಕೇರಳ ಮೂಲದ ಸುಜಿತ್ ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಮಾ.13ರಂದು ತಾನು ಸುಜಿತ್ ಎಂಬಾತನೊಂದಿಗೆ ಬಂದು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದೆ. ಮಾ.16ರಂದು ರಾತ್ರಿ 8ಕ್ಕೆ ಆರೋಪಿ ಸುಜಿತ್ ಆಸ್ಪತ್ರೆಯ ಕೊಠಡಿಯಲ್ಲಿ ತನ್ನನ್ನು ಬಲವಂತ ವಾಗಿ ಅತ್ಯಾಚಾರ ಎಸಗಿದ್ದ. ಬಳಿಕ ತನ್ನನ್ನು ವಿವಸ್ತ್ರಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಎಪ್ರಿಲ್ 4ರಂದು ಆರೋಪಿ ಸುಜಿತ್ ತನ್ನ ಪೋಟೋಗಳನ್ನು ತೋರಿಸಿ ಮಂಗಳೂರಿಗೆ ಬಲವಂತವಾಗಿ ಕರೆದುಕೊಂಡು ಬಂದು ಖಾಸಗಿ ಹೊಟೇಲ್‌ನಲ್ಲಿ ಎ.8ರವರೆಗೆ ಅತ್ಯಾಚಾರಗೈದಿದ್ದ. ಬಳಿಕ ಅಲ್ಲೂ ವಿವಸ್ತ್ರಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಆ ಬಳಿಕ ತನಗೆ ಫುಡ್‌ಪಾಯಿಸನ್ ಆಗಿದ್ದು, ಎ.8ರಿಂದ ಮೇ 10ರವರೆಗೆ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿದ್ದೆ. ಅಲ್ಲೂ ಕೂಡ ಆರೋಪಿ ಸುಜಿತ್ ಅತ್ಯಾಚಾರಗೈದಿದ್ದು, ಈ ವಿಚಾರವನ್ನು ಯಾರಲ್ಲಾದರು ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಮಹಿಳೆ ಕದ್ರಿ ಠಾಣೆಗೆ ಮೇ 15ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಪೊಲೀಸರು ಕೇರಳದ ಹೊಸದುರ್ಗ ತಾಲೂಕಿನ ಪುಲ್ಲೂರು ಗ್ರಾಮದ ಕೊಡವಳಂ ನಿವಾಸಿ ಆರೋಪಿ ಸುಜಿತ್ ಕೆ. ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News