×
Ad

ಬೆಳ್ತಂಗಡಿ: ಬೊಲೆರೊ ಢಿಕ್ಕಿ; ಬೈಕ್‌ ನಲ್ಲಿದ್ದ ಬಾಲಕಿ ಮೃತ್ಯು, ಚಾಲಕನಿಗೆ ಗಾಯ

Update: 2024-07-27 18:14 IST

ಬೆಳ್ತಂಗಡಿ, ಜು.27: ಬೊಲೆರೊ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತಂದೆಯ ಜೊತೆ ಹೋಗುತ್ತಿದ್ದ ಬಾಲಕಿ ಮೃತಪಟ್ಟು, ಬೈಕ್‌ ಚಾಲಕ ಗಾಯಗೊಂಡ ಘಟನೆ ಮುಂಡಾಜೆಯ ಸೀಟು ಬಳಿ ಶನಿವಾರ ಸಂಜೆ ಸಂಭವಿಸಿದೆ.

ಮುಂಡಾಜೆ ಕಲ್ಮಂಜ ನಿವಾಸಿ ಗುರುಪ್ರಸಾದ್ ಗೋಖಲೆ ಹಾಗೂ ಅವರ ಮಗಳು ಅನರ್ಘ್ಯ (9) ಉಜಿರೆಯಿಂದ ಮನೆಗೆ ಹೊರಟಿದ್ದರು. ಈ ವೇಳೆ ಬೊಲೆರೊ ಹಿಂದಿನಿಂದ ಢಿಕ್ಕಿ ಹೊಡೆದು ಬಳಿಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿತ್ತು.

ಗಾಯಗೊಂಡಿದ್ದ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಅನರ್ಘ್ಯ ಮೃಪಟ್ಟಿರುವುದಾಗಿ ತಿಳಿದುಬಂದಿದೆ. ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ.

ಅಪಘಾತವಾದ ಬಳಿಕ ತಪ್ಪಿಸಿಕೊಂಡಿದ್ದ ಬೊಲೆರೊ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News