ನೀಟ್ ವಿರುದ್ಧ ಹೋರಾಟದಲ್ಲಿ ಮೊದಲ ಗೆಲುವು: ಐವನ್ ಡಿಸೋಜ
ಮಂಗಳೂರು: ರಾಜ್ಯ ಸರಕಾರ ನೀಟ್‌ನಿಂದ ಹೊರಗುಳಿಯುಳಿಯುವ ಸರ್ವಾನುಮತದ ತೀರ್ಮಾನ ಕೈಗೊಂಡಿದ್ದು ನಿರ್ಣಯ ಮಂಡನೆ ಆಗಿದೆ.ಇದು ತಾನು ವಿಧಾನಪರಿಷತ್ ಸದಸ್ಯ ನಾಗಿ ಪ್ರಥಮ ಅಧಿವೇಶನದಲ್ಲಿ ನಡೆಸಿದ ಹೋರಾಟ ದಲ್ಲಿ ಸಿಕ್ಕಿದ ಮೊದಲು ಗೆಲುವು ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿವೇಶನ ಆರಂಭಗೊಂಡ ಮೊದಲ ದಿನವೇ ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ನೀಟ್ ಬಗ್ಗೆ ಮೊದಲ ಪ್ರಶ್ನೆ ಎತ್ತುವ ಮೂಲಕ ಸರಕಾರದ ಗಮನ ಸೆಳೆದಿದ್ದೆ ಎಂದು ಹೇಳಿದರು.
ಮುಖ್ಯ ಸಿದ್ದರಾಮಯ್ಯ ನೇತೃತ್ವದ ಸರಕಾರ ಕರ್ನಾಟಕದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್‌ನ ವಿಚಾರದಲ್ಲಿ ಕೊಗೂ ದೃಢ ನಿರ್ಧಾರ ಕೈಗೊಂಡಕ್ಕಾಗಿ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇನೆ ಎಂದರು.
ವಿಧಾನಪರಿಷತ್ತಿನ ಅಧಿವೇಶನ ೮ ದಿನಗಳಲ್ಲಿ ಮುಗಿದಿದೆ. ಅವಕಾಶ ಇರುವ ೪೫ ಪ್ರಶ್ನೆಗಳಲ್ಲಿ 45 ಪ್ರಶ್ನೆಗಳನ್ನು ಕೇಳಿ ದ್ದೇನೆ. ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ , ಶೂನ್ಯ ವೇಳೆಯಲ್ಲಿ ಗಮನ ಸೆಳೆಯುವ ಪ್ರಶ್ನೆಗಳನ್ನು ತ್ತಿದ್ದೆ. ಎಲ್ಲವೂ ಸಾರ್ವಜನಿಕರಿಗೆ ಸಂಬಂಧಿಸಿದ್ದಾಗಿದೆ, ಬಹುತೇಕ ಪ್ರಶ್ನೆಗಳಿಗೂ ಸರಕಾರದಿಂದ ಸಮರ್ಪಕ ಉತ್ತರ ಸಿಕ್ಕಿದೆ ಎಂದರು.
ಅಧಿವೇಶನದ ಮೊದಲ ದಿನವೇ ನೀಟ್ ದೇಶದ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಪ್ರತಿಭಾವಂತರಿಗೆ ಅನ್ಯಾಯವಾ ಗುತ್ತದೆ ಎಂದು ಪ್ರತಿಪಾದಿಸಿದ್ದೆ. ಕೇರಳ ಮತ್ತು ತಮಿಳುನಾಡಿನಂತೆ ಕರ್ನಾಟಕ ಕೂಡಾ ನೀಟ್‌ನಿಂದ ಹೊರಗೆ ಬರಬೇಕು ಎಂದು ಒತ್ತಾಯಿಸಿದ್ದೆ ಎಂದು ಮಾಹಿತಿ ನೀಡಿದರು.
ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ 2017ರಲ್ಲಿ ನೀಟ್‌ನ್ನು ಜಾರಿಗೆ ತರಲಾಗಿತ್ತು. ಒಕ್ಕೂಟದ ವ್ಯವಸ್ಥೆಯಲ್ಲಿ ನಾವು ನೀಟ್‌ನ್ನು ಒಪ್ಪಿಕೊಂಡಿದ್ದೆವು. ಆದರೆ ಇವತ್ತು ಇದರಲ್ಲಿ ಅನ್ಯಾಯವಾಗುತ್ತದೆ. ನೀಟ್‌ಲ್ಲಿ ಅಗ್ರಸ್ಥಾನ ಪಡೆದವರು ಪಿಯುಸಿ ಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಿಯುಸಿ ಪರೀಕ್ಷೆಗೆ ಓದುವುದಾ? ನೀಟ್ ಹೋಗುವುದಾ ? ಎಂಬ ಗೊಂದಲದ ವ್ಯವಸ್ಥೆ ನಮ್ಮಲ್ಲಿದೆ. ಪಿಯುಸಿಯಲ್ಲಿ ದೊರೆತ ಮಾರ್ಕ್ ಕೌಂಟ್ ಆಗುವುದಿಲ್ಲ. ಪಿಯುಸಿಯಲ್ಲಿ ಶೇ 98 ಪರ್ಸೆಂಟೇಜ್ ಬಂದರೂ ಪ್ರಯೋಜನ ಇಲ್ಲದಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೆ ಸಿಇಟಿ ವ್ಯವಸ್ಥೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ಎಲ್ಲವೂ ಪಾರದರ್ಶಕ ವಾಗಿ ನಡೆಯುತ್ತಿತ್ತು. ಕಡುಬಡವನೂ ಪ್ರತಿಭಾವಂತ ನಾಗಿದ್ದರೆ ವೈದ್ಯನಾಗುವ ಅವಕಾಶ ಇತ್ತು ಎಂದರು.
ಸದನದಲ್ಲಿ ಪಿಜಿ ನೀಟ್ ಬಗ್ಗೆ ಇನ್ನೊಂದು ಪ್ರಶ್ನೆ ಎತ್ತಿದ್ದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸರಕಾರಿ ವೈದ್ಯರು ಪಿಜಿಗೆ ಅರ್ಜಿ ಹಾಕಿ ಪರೀಕ್ಷೆಗೆ ಸಿದ್ದತೆ ನಡೆಸಲು ವರ್ಷಕ್ಕೆ ದೊರೆಯುವ 30 ದಿನಗಳ ರಜೆಯ ಸದುಪಯೋಗ ಮಾಡುತ್ತಿದ್ದರು. 2200 ಮಂದಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಜುಲೈ 11ಕ್ಕೆ ಪರೀಕ್ಷೆ ಇತ್ತು.ಆದರೆ ನೀಟ್ ಯು.ಜಿ. ಪರೀಕ್ಷೆಯಲ್ಲಿ ಕೆಲವು ರಾಜ್ಯಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಹಿನ್ನೆಲೆಯಲ್ಲಿ ನೀಟ್ ಪಿ.ಜಿ.ಪರೀಕ್ಷೆಯ ದಿನಾಂಕವನ್ನು ಸಹ ಮುಂದೂಡಲಾಗಿತ್ತು. ಇದೀಗ ವೈದ್ಯರ ರಜೆ ಮುಗಿದಿದೆ. ಅವರಿಗೆ ಪರೀಕ್ಷೆಗೆ ತಯಾರಿಗೆ ರಜೆ ಇಲ್ಲ. ಅವರು ರಜೆ ಮಾಡಿದರೆ ದಂಡ ಕಟ್ಟ ಬೇಕಾಗಿದೆ.
ಕೇಂದ್ರ ಸರಕಾರ ಇದಕ್ಕೆ ಹೊಣೆಯಾಗಿದೆ. ಲೋಕಸಭಾ ಸದಸ್ಯರು ವಿದ್ಯಾರ್ಥಿಗಳ ಬಗ್ಗೆ ಯೋಚಿಸಲಿ ಎಂದು ನುಡಿದರು. ನಾವು ನೀಟ್‌ನ ವಿರುದ್ಧ ಸುಪ್ರೀಂ ಕೋರ್ಟ್‌ನ ಗಮನ ಸೆಳೆಯುತ್ತವೆ. ಅದಕ್ಕಾಗಿ ತಯಾರಿ ನಡೆಸಲಾಗುವುದು ಎಂದು ಐವನ್ ಡಿ ಸೋಜ ಹೇಳಿದರು.
ನೀಟ್ ಹಗರದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ ಬೇಕಿತ್ತು. ಆದರೆ ಅವರು ರಾಜೀಮೆ ಕೊಡದೆ ಪಾರದರ್ಶಕ ತನಿಖೆಯಾಗದು ಎಂದು ಮಂಗಳೂರಿಗೆ ಸರಕಾರಿ ಕಾಲೇಜು ದೊರೆಯುವ ವಿಚಾರದಲ್ಲಿ ಖಾಸಗಿ ಮೆಡಿಕಲ್ ಕಾಲೇಜ್‌ಗಳ ಲಾಭಿ ಇಲ್ಲ. ಇಲ್ಲಿ ತುಂಬಾ ಮೆಡಿಕಲ್ ಕಾಲೇಜು ಇರುವುದ ರಿಂದ ಸರಕಾರಿ ಮೆಡಿಕಲ್ ಕಾಲೇಜ್ ಇಲ್ಲಿಗೆ ದೊರೆಯುವಾಗ ತಡವಾಗಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶೀಧರ ಹೆಗ್ಡೆ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಪಕ್ಷದ ಧುರೀಣರಾದ ನವೀನ್ ಡಿ ಸೋಜ, ಪ್ರಕಾಶ್ ಸಾಲ್ಯಾನ್, ಭಾಸ್ಕರ್, ಸುದರ್ಶನ ಜೈನ್ ಉಪಸ್ಥಿತರಿದ್ದರು.