×
Ad

ಗುರು ನಾನಕ್ ಜಯಂತಿ ದಿನ ಸಾರ್ವತ್ರಿಕ ರಜೆ ಘೋಷಿಸಲು ಎನ್ಎಸ್ ಯುಐ ಒತ್ತಾಯ: ಸ್ಪೀಕರ್ ಗೆ ಮನವಿ

Update: 2024-10-01 12:53 IST

ಸುಖ್ವಿಂದರ್ ಸಿಂಗ್ ರಾಥೋಡ್ 

ಮಂಗಳೂರು, ಅ.1: ದೇಶದಲ್ಲಿ ನವೆಂಬರ್ 15ರಂದು ದೇಶಾದ್ಯಂತ ಗುರುನಾನಕ್ ಜಯಂತಿಯನ್ನು ಆಚರಿಸಲಾಗುತ್ತಿದ್ದು, ರಾಜ್ಯದಲ್ಲಿ ಆ ದಿನದಂದು ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಒತ್ತಾಯಿಸಿ ಎನ್ಎಸ್ ಯುಐ ವತಿಯಿಂದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ.

ಎನ್ಎಸ್ಯುಐ ದ.ಕ. ಜಿಲ್ಲಾ ಘಟಕದ ಉಪಾಧ್ಯಕ್ಷ ಸುಖ್ವಿಂದರ್ ಸಿಂಗ್ ರಾಥೋಡ್ ಸಲ್ಲಿರುವ ಮನವಿಯಲ್ಲಿ, ದೇಶದಲ್ಲಿ ಗುರು ನಾನಕ್ ದೇವ್ ರವರ ಅನುಯಾಯಿಗಳು ಭಾರೀ ಸಂಖ್ಯೆಯಲ್ಲಿದ್ದಾರೆ. ಸಿಕ್ಖರು ಹಾಗೂ ಇತರ ಧರ್ಮದವರೂ ಗುರು ನಾನಕ್ ರನ್ನು ವಿಶ್ವದೆಲ್ಲೆಡೆ ಆರಾಧಿಸುತ್ತಾರೆ. ಹಾಗಾಗಿ ಪವಿತ್ರ ಗುರು ನಾನಕ್ ಜಯಂತಿ ದಿನದಂದು ಕರ್ನಾಟಕ ರಾಜ್ಯ ಸರಕಾರ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News