×
Ad

ಎಸ್ಸೆಸ್ಸೆಫ್ ಸಾಹಿತ್ಯೋತ್ಸವ: ಕಲಾ ಪ್ರತಿಭೆಯಾಗಿ ಸಾಹಿಲ್ ದಾವಣಗೆರೆ

Update: 2024-11-19 19:30 IST

ಮಡಿಕೇರಿ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಹಮ್ಮಿಕೊಂಡ ಸಾಹಿತ್ಯೋತ್ಸವ ಸ್ಪರ್ಧಾ ಕೂಟದಲ್ಲಿ 'ಸ್ಟಾರ್ ಆಫ್ ಫೆಸ್ಟ್' ಕಲಾ ಪ್ರತಿಭೆಯಾಗಿ ಹಾವೇರಿ ಮುಈನುಸ್ಸುನ್ನಾ ಸಂಸ್ಥೆಯ ವಿದ್ಯಾರ್ಥಿ ಸಾಹಿಲ್ ದಾವಣಗೆರೆ ಹೊರಹೊಮ್ಮಿದ್ದಾರೆ.

ಕೊಡಗಿನ ಕೊಂಡಂಗೇರಿಯಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಮಿಂಚಿದ ಪ್ರತಿಭಾವಂತ ಉರ್ದು ಹಾಡುಗಾರನಾಗಿರುವ ಇವರು ಇದೀಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನ. 30, 31 ಮತ್ತು ಡಿ.1ರಂದು ರಾಷ್ಟ್ರೀಯ ಸಾಹಿತ್ಯೋತ್ಸವವು ಗೋವಾದಲ್ಲಿ ನಡೆಯಲಿದೆ.

ದಾವಣಗೆರೆ ನಿವಾಸಿಗಳಾದ ಶಫೀ ಸಾಹೆಬ್ ಮತ್ತು ಸಬ್ರೀನ್ ಬಾನು ಅವರ ಪುತ್ರನಾದ ಸಾಹಿಲ್ ಹಾವೇರಿ ಮುಈನಸ್ಸುನ್ನಾದ ಸವನೂರು ಕ್ಯಾಂಪಸ್ ನಲ್ಲಿ ಹೈಸ್ಕೂಲ್ ಮತ್ತು ದರ್ಸ್ ವಿದ್ಯಾರ್ಥಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News