×
Ad

ರಾಷ್ಟ್ರಿಯ ಕ್ರೀಡಾಕೂಟದ ವೇಯ್ಟ್ ಲಿಫ್ಟಿಂಗ್: ಆಳ್ವಾಸ್ ವಿದ್ಯಾರ್ಥಿನಿ ಉಷಾಗೆ ಕಂಚಿನ ಪದಕ

Update: 2025-02-03 21:32 IST

ಉಷಾ

ಮೂಡುಬಿದಿರೆ: ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ಜರುಗಿದ ರಾಷ್ಟ್ರಿಯ ಕ್ರೀಡಾಕೂಟದ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉಷಾ ಎಸ್ ಆರ್ ಕಂಚಿನ ಪದಕವನ್ನು ಪಡೆದಿದ್ದಾರೆ. ಇವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ. ೮೭ಕೆಜಿ ದೇಹ ತೂಕ ವಿಭಾಗದಲ್ಲಿ ಸ್ಪರ್ಧಿಸಿರುವ ಇವರು ಒಟ್ಟು 197 ಕೆಜಿ ಭಾರ ಎತ್ತಿ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

76 ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ದಿಸಿದ್ದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ತನುಷ ನಾಲ್ಕನೇ ಸ್ಥಾನ ಪಡೆದಿದ್ದಾರೆ. ರಾಷ್ಟ್ರಿಯ ಕ್ರೀಡಾಕೂಟದ ವೇಯ್ಟ್ಲಿಫ್ಟಿಂಗ್ ವಿಭಾಗದಲ್ಲಿ ಇವರು ಇರ್ವರೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದವರು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕ್ರೀಡಾಪಟುಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News