×
Ad

ಕಲ್ಲಾಪು: ಬೃಹತ್ ರಕ್ತದಾನ, ಕಣ್ಣು ತಪಾಸಣೆ ಶಿಬಿರ

Update: 2025-02-23 18:08 IST

ಉಳ್ಳಾಲ : ಉಚಿತ ಕಣ್ಣು ತಪಾಸಣೆ ಸಹಿತ ವೈದ್ಯಕೀಯ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹ. ಇದರಿಂದ ಬಹಳಷ್ಟು ರೋಗಿಗಳಿಗೆ ಸಮಸ್ಯೆ ಪರಿಹಾರ ಕಾಣಲು ಸಾಧ್ಯ ಎಂದು ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ.ಇಫ್ತಿಕರ್ ಹೇಳಿದರು.

ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಇದರ ಆಶ್ರಯದಲ್ಲಿ ಕಲ್ಲಾಪು  ಅಝಾದ್ ಗ್ರೌಂಡ್ ನಲ್ಲಿ  ಯೆನೆಪೋಯ ಮೆಡಿಕಲ್ ಕಾಲೇಜು, ಕೆಎಂಸಿ  ಹಾಗೂ ವೆನ್ಲಾಕ್  ಜಿಲ್ಲಾ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಇವುಗಳ ಸಹಯೋಗದಲ್ಲಿ  ನಡೆದ ಬೃಹತ್ ರಕ್ತದಾನ ಹಾಗೂ ಉಚಿತ ಕಣ್ಣು ತಪಾಸಣೆ, ಕನ್ನಡಕ ವಿತರಣೆ ಮತ್ತು ಉಚಿತ ಕಣ್ಣು ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ರೋಗಿಗಳಿಗೆ ಉಚಿತ ಕಣ್ಣು ತಪಾಸಣೆ ಶಿಬಿರ ಜೊತೆಗೆ ಕನ್ನಡಕ, ಶಸ್ತ್ರ ಚಿಕಿತ್ಸೆ ವ್ಯವಸ್ಥೆ ಸಂಘಟನೆ ಮಾಡಿದೆ. ಭಾಗವಹಿಸಿದ ರೋಗಿಗಳಿಗೆ ಹಣ್ಣು ಹಂಪಲು, ಪಾನೀಯ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮೆಚ್ಚುಗೆ ವ್ಯಕ್ತಪಡಿಸಿದರು.

ಉಳ್ಳಾಲ, ದೇರಳಕಟ್ಟೆ, ಕಡೆಯಿಂದ ಹಲವು ಮಂದಿ ಈ ಶಿಬಿರಕ್ಕೆ ಆಗಮಿಸಿದ್ದು, ಒಟ್ಟು 651 ಮಂದಿ ಕಣ್ಣಿನ ತಪಾಸಣಾ ಚಿಕಿತ್ಸೆ ಪಡೆದು ಶಿಬಿರ ದ ಪ್ರಯೋಜನ ಪಡೆದು ಕೊಂಡರು. ಈ ಪೈಕಿ 410 ರೋಗಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ವೈದ್ಯರ ಸಲಹೆಯಂತೆ 72 ರೋಗಿಗಳಿಗೆ ಉಚಿತ ಕಣ್ಣಿನ ಚಿಕಿತ್ಸೆ ಗೆ ವ್ಯವಸ್ಥೆ ಮಾಡಲಾಯಿತು. 490 ಮಂದಿ ರಕ್ತದಾನ ಮಾಡಿದರು. ನಾಲ್ಕು ಆಸ್ಪತ್ರೆಗಳ ಸಿಬ್ಬಂದಿ ಹಾಗೂ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸಿ ರೋಗಿಗಳ ಚಿಕಿತ್ಸೆಗೆ ನೆರವಾದರು.

ಈ ಸಂದರ್ಭದಲ್ಲಿ ಯುಟಿ ಇಫ್ತಿಕರ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್,ನಗರ ಸಭೆ ಸದಸ್ಯರಾದ ಬಾಜಿಲ್ ಡಿಸೋಜ, ಮುಸ್ತಾಕ್ ಪಟ್ಲ, ಕಾಂಗ್ರೆಸ್ ಮುಖಂಡ ರಾದ ನಾಸೀರ್ ಅಹ್ಮದ್ ಸಾಮಣಿಗೆ, ಮುಸ್ತಫಾ ಉಳ್ಳಾಲ , ದಿನೇಶ್ ರೈ, ಮನ್ಸೂರ್ ಮಂಚಿಲ ಮತ್ತಿತರರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News