×
Ad

ʼಕೂಳೂರು ಸೇತುವೆ ಬಳಿ ದರ್ಪ ಮೆರೆದ ಸಂಚಾರ ಪೊಲೀಸರುʼವೀಡಿಯೊ ವೈರಲ್: ಪೊಲೀಸ್‌ ಇಲಾಖೆ ಸ್ಪಷ್ಟನೆ

Update: 2025-03-21 23:03 IST

ಕೂಳೂರು: ʼಕೂಳೂರು ಸೇತುವೆ ಬಳಿ ದರ್ಪ ಮೆರೆದ ಸಂಚಾರ ಪೊಲೀಸರುʼ ಎಂಬ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

ಮಾ.21ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ "ಕೂಳೂರು ಸೇತುವೆ ಬಳಿ ದರ್ಪ ಮೆರೆದ ಸಂಚಾರ ಪೊಲೀಸರುʼ ಎಂಬ ವೀಡಿಯೊ 2024ರ ಡಿ.23ರಂದು ಕುದುರೆಮುಖ ಜಂಕ್ಷನ್‌ ನಲ್ಲಿ ನಡೆದಿರುವುದಾಗಿದೆ.

ಪಾನಮತ್ತನಾದ ಓರ್ವ ವ್ಯಕ್ತಿ ಕುದುರೆಮುಖ ಜಂಕ್ಷನ್ ನಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಸಾರ್ವಜನಿಕರ ಸಹಾಯದೊಂದಿಗೆ ಪೊಲೀಸರು ಆ ವ್ಯಕ್ತಿಯನ್ನು ಬದಿಗೆ ಕಳುಹಿಸಿದರೂ ಆ ವ್ಯಕ್ತಿ ಪದೇ ಪದೇ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಸಮಯ ತುಂಬಾ ಕುಡಿದಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು ಆತನಿಗೆ ಮೂಗಿನಲ್ಲಿ ರಕ್ತ ಬಂದಿರುತ್ತದೆ.

ಈ ವೇಳೆ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ವಾಹನದ ಬಳಿ ಕರೆದುಕೊಂಡು ಬರುತ್ತಿರುವಾಗ ಯಾರೋ ಸಾರ್ವಜನಿಕರು ತಪ್ಪಾಗಿ ತಿಳಿದುಕೊಂಡು ವೀಡಿಯೊ ಮಾಡಿ ವೈರಲ್‌ ಮಾಡಿದ್ದಾರೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News