ಅಪಘಾತಕ್ಕೀಡಾದ ಆಶ್ರಫ್ ಮೃತ್ಯು ಸರಕಾರಿ ಪ್ರಾಯೋಜಿತ ಕೊಲೆ: ಸುರತ್ಕಲ್ ಕಾನ ನಾಗರಿಕ ಹೋರಾಟ ಸಮಿತಿ
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ ಗುಂಡಿಗಳನ್ನು ಮುಚ್ಚದೆ ದ್ವಿಚಕ್ರ ವಾಹನ ಸವಾರರ ಸಾವಿಗೆ ಕಾರಣ ವಾಗುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ, ಹೆದ್ದಾರಿ ಗುಂಡಿಗೆ ಬಿದ್ದು ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ ಅಶ್ರಫ್ ಜನತಾ ಕಾಲನಿ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿ ಖಂಡಿಸಿ ಸುರತ್ಕಲ್ ಕಾನ ನಾಗರಿಕ ಹೋರಾಟ ಸಮಿತಿಯಿಂದ ಸುರತ್ಕಲ್ ಜಂಕ್ಷನ್ ನಲ್ಲಿ ಬುಧವಾರ ಸಂಜೆ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸ ಮಾತನಾಡಿದ ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ಕಳೆದ ಎಂಟು ವರ್ಷಗಳಿಂದ ಸುರತ್ಕಲ್ ಎನ್ಐಟಿಕೆಯ ಅನಧಿಕೃತ ಟೋಲ್ ಗೇಟ್ ವಿರೋಧಿ ಹೋರಾಟಗಳ ಜೊತೆ ಜೊತೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಸುಸ್ಥಿತಿಯಲ್ಲಿಡುವಂತೆ ನಾಗರಿಕ ಸಮಾಜ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಎಚ್ಚರಿಕೆ ನೀಡುತ್ತಲೇ ಬಂದಿದೆ. ಅವರು ನಮ್ಮ ಎಚ್ಚರಿಕೆಗೆ ಎಚ್ಚೆತ್ತುಕೊಳ್ಳದ ಪರಿಣಾಮವಾಗಿ ಆಶ್ರಫ್ ರಾಷ್ಟ್ರೀಯ ಹೆದ್ದಾರಿ 66ರ ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿ ನಮ್ಮನ್ನು ಅಗಲುವಂತಾಗಿದೆ. ಈ ಅಪಘಾತಕ್ಕೆ ಜನಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ನೇರ ಹೊಣೆ ಎಂದು ಅವರು ದೂರಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳಿಂದಾಗಿ ಮನೆಯಿಂದ ದ್ವಿಚಕ್ರ ವಾಹನಗಳಲ್ಲಿ ತೆರಳಿರುವ ಮನೆಯ ಗಂಡಸರು ಮತ್ತು ಹೆಂಗಸರು ತಿರುಗಿ ಮನೆಗೆ ಬಂದು ಸೇರುತ್ತಾರೆ ಎನ್ನುವ ಧೈರ್ಯ ಯಾವ ಮನೆಯವರಿಗೂ ಇಲ್ಲ.
ನಂತೂರಿನಿಂದ ಮುಂದೆ ಮತ್ತು ಮುಕ್ಕದ ಬಳಿಕ ರಾಷ್ಟ್ರೀಯ ಹೆದ್ದಾರಿ ಚೆನ್ನಾಗಿದೆ ಅದನ್ನು ಕಾಲಕಾಲಕ್ಕೆ ಉತ್ತಮ ರೀತಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ ಆದರೆ ಸುರತ್ಕಲ್ ನಿಂದ ನಂದೂರು ವರೆಗಿನ ಹೆದ್ದಾರಿ ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಸಂಪೂರ್ಣ ಹದಗೆಡುತ್ತಿದ್ದು ಜೀವ ಬಳಿಯನ್ನು ಪಡೆದು ಕೊಳ್ಳುತ್ತಿದೆ. ಹೆದ್ದಾರಿಯಲ್ಲಿನ ಗುಂಡಿಗಳಿಂದಾಗಿ ಸಂಭವಿಸುವ ಎಲ್ಲಾ ಅಪಘಾತಗಳು ಮತ್ತು ಸಾವು ನೋವಿಗೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಆರೋಪಿ ಗಳನ್ನಾಗಿ ಮಾಡಬೇಕೆಂದು ಮುನೀರ್ ಆಗ್ರಹಿಸಿದರು.
ಬಳಿಕ ಮಾತನಾಡಿದ ಡಿವೈಎಫ್ಐ ಮುಖಂಡ ಬಿ.ಕೆ.ಇಮ್ತಿಯಾಝ್, ನಾಲ್ಕು ರಾಜ್ಯಗಳನ್ನು ಸಂಪರ್ಕಿ ಸುವ ರಾಷ್ಟ್ರೀಯ ಹೆದ್ದಾರಿ66ನ್ನು ಉತ್ತಮ ರೀತಿಯಲ್ಲಿ ನಿರ್ಮಿಸಿ ನಿರ್ವಹಿಸಬೇಕಿತ್ತು. ಇದು ಉದ್ದಿಮೆಗಳು, ಪ್ರವಾಸೋದ್ಯಮ ಸೇರಿದಂತೆ ರಾಜ್ಯ, ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಇಲ್ಲಿನ ಜನಪ್ರತಿನಿಧಿಗಳು ಸಂಪೂರ್ಣವಾಗಿ ನಂತೂರು- ಸುರತ್ಕಲ್ ರಸ್ತೆಯನ್ನು ನಿರ್ಲಕ್ಷಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಪ್ರತಿದಿನ ಅಪಘಾತಗಳು ನಡೆಯುತ್ತಿದ್ದು ಸಾವು ನೋವುಗಳು ಸಂಭವಿಸುತ್ತಿದೆ. ಈ ಅಪಘಾತಗಳಿಗೆ ಮತ್ತು ಸಾವು ನೋವುಗಳಿಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಹೆದ್ದಾರಿಗಳ ಗುಂಡಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಚಿಂತಿಸುತ್ತಿರುವ ಪ್ರತಿನಿಧಿಗಳಿಂದಾಗಿ ಈ ಹೆದ್ದಾರಿ ಹೋಂಡಗುಂಡಿಗಳಿಂದ ತುಂಬಿಕೊಂಡು ಸಾವಿಗೆ ಆಹ್ವಾನವನ್ನು ನೀಡುತ್ತಿದೆ ಎಂದು ಇಂಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದ ಗುಂಡಿಗೆ ದ್ವಿಚಕ್ರವಾಹನ ಬಿದ್ದು ಅಪಘಾತಕ್ಕೀಡಾಗಿ ಮೃತಪಟ್ಟ ಅಶ್ರಫ್ ಅವರ ಸಾವಿನ ಅಪರಾಧಿಗಳು ನಮ್ಮ ಸಂಸದ ಬೃಜೇಶ್ ಚೌಟ ಮತ್ತು ಶಾಸಕ ಭರತ್ ಶೆಟ್ಟಿ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ರಮೇಶ್ ಟಿ.ಎನ್., ಅಶ್ರಫ್ ಅವರ ಆಪ್ತರಾದ ಧೀರಜ್ ಪ್ರಸಾದ್ ಮೈಸೂರು ಮಾತನಾಡಿದರು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಂಸದ ಬೃಜೇಶ್ ಚೌಟ, ಶಾಸಕರಾ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ವಿರುದ್ಧ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ವಕೀಲರು ಹಾಗೂ ಮೊಗವೀರ ಸಮಾಜದ ಗುರಿಕಾರರಾದ ಗಂಗಾಧರ ಹೊಸಬೆಟ್ಟು, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಡಿವೈಎಫ್ ಐ ಸುರತ್ಕಲ್ ಘಟಕದ ಮುಖಂಡರಾದ ಬಿ.ಕೆ. ಮಕ್ಸೂದ್, ನವಾಝ್ ಕುಳಾಯಿ, ಅಬೂಸಾಲಿ, ಸಾದಿಕ್ ಕಿಲ್ಪಾಡಿ, ಶ್ರೀನಾಥ್ ಕುಲಾಲ್, ಮೃತ ಅಶ್ರಫ್ ಸಹೋದರ ಅಬ್ದುಲ್ ಸಲಾಂ ಹಾಗೂ ಕುಟುಂಬಸ್ಥರು, ಒಡನಾಡಿಗಳು ಇದ್ದರು.
"ಅಶ್ರಫ್ ಸಾವು ಸರಕಾರಿ ಪ್ರಾಯೋಜಿತ ಕೊಲೆ"
ರಾಷ್ಟ್ರೀಯ ಹೆದ್ದಾರಿ 66ರ ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿ ಸಾವಿಗೀಡಾದ ಅಶ್ರಫ್ ಅವರ ಸಾವು ಸರಕಾರಿ ಪ್ರಾಯೋಗಿತ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸುಸ್ಥಿತಿಯಲ್ಲಿರುವಂತೆ ಆಗ್ರಹಿಸಿ ನಾಗರಿಕರು ಪ್ರತಿಭಟನೆ ಪಾದಯಾತ್ರೆ, ಮುಂತಾದ ವುಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದರು ಸರಕಾರ, ಗ್ರಹ ಇಲಾಖೆ, ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಶಾಸಕರು ಹೆದ್ದಾರಿ ಪ್ರಾಧಿಕಾರದ ಕಿವಿ ಹಿಂಡಿ ಹೆದ್ದಾರಿ ಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿಲ್ಲ. ಇದರ ಪರಿಣಾಮವಾಗಿ ಅಶ್ರಫ್ ಹೊಂಡಕ್ಕೆ ಬಿದ್ದು, ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.
ಈವರೆಗೂ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಂಡಾ ಗುಂಡಿಗಳಿಂದಾಗಿ ನಡೆದ ಯಾವುದೇ ಅಪಘಾತ ಸಾಬು ನೋವುಗಳಿಗೆ ಬಡಪಾಯಿ ವಾಹನ ಚಾಲಕರನ್ನು ಅಪರಾಧಿಗಳನ್ನಾಗಿ ಮಾಡಿ ಅವರು ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಆದರೆ ಹೋಂಡಾ ಗುಂಡಿಗಳಿಗೆ ಕಾರಣರಾದ ಹೆದ್ದಾರಿ ಪ್ರಾದಿಕಾರ ಮತ್ತು ಅವರ ಕಿವಿ ಹಿಂದಿ ಹೆದ್ದಾರಿಯನ್ನು ಸುಸ್ಥಿತಿಯಲ್ಲಿ ಇರಬೇಕಾಗಿದ್ದ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ. ಇದರಿಂದಾಗಿಯೇ ಹೆದ್ದಾರಿ ಪ್ರಾದಿಕಾರ ಮತ್ತು ಜನಪ್ರತಿನಿಧಿಗಳು ಹೆದ್ದಾರಿಯ ಸುಸ್ಥಿತಿಗೆ ಮುಂದಾಗದೆ ನಿರ್ಲಕ್ಷಿಸುತ್ತಿದ್ದಾರೆ. ಹಾಗಾಗಿ ಅಶ್ರಫ್ ಸೇರಿ ದಂತೆ ಈ ಮೊದಲು ರಸ್ತೆಯ ಹೊಂಡ ಗುಂಡಿಗಳಿಂದ ಅಪಘಾತಕ್ಕೊಳಗಾಗಿ ಸಾವು ಮತ್ತು ನೋವುಗಳಿಗೆ ಶಾಸಕರು, ಸಂಸದರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಅಪರಾಧಿಗಳನ್ನಾಗಿಸಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಕೆಂದು ಇಮ್ತಿಯಾಝ್ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.