×
Ad

ಪುತ್ತೂರು: ಸಂತ್ರಸ್ತೆಯ ಮನೆಗೆ ಎಸ್‌ಡಿಪಿಐ, ವಿಮೆನ್ ಇಂಡಿಯಾ ಮೂವ್ ಮೆಂಟ್ ಭೇಟಿ

Update: 2025-07-08 23:06 IST

ಪುತ್ತೂರು: ಭೇಟಿ ಬಚಾವೋ ಭೇಟಿ ಪಡಾವೋ ಅಂತೆಲ್ಲ ಹೇಳ್ತಾರೆ. ಆದ್ರೆ ಮಹಿಳೆಗೆ ಅನ್ಯಾಯವಾದಾಗ ನ್ಯಾಯದ ಪರವಾಗಿ ಇರದೆ ಪ್ರಭಾವಿಗಳ ಪರ ನಿಂತು ಬೆಂಬಲ ನೀಡೋದು ಈಗಿನ ಕೆಲ ವರ್ಷಗಳಿಂದ ನಡೀತಾ ಬರ್ತಾ ಇದೆ. ಆರೋಪಿಗಳ ಪರವಾಗಿ ಬಿಜೆಪಿ ಸಂಘಪರಿವಾರ ನಿಲ್ಲೋದ್ರಿಂದ ಇಂತಹ ಘಟನೆಗಳು ಮರಕಳುಹಿಸುತ್ತಾ ಇದೆ. ಇಂತಹ ಅನ್ಯಾಯಗಳು ಖಂಡನೀಯವಾಗಿದ್ದು, ಇಂತಹ ಘಟನೆಗಳು ನಡೆದಾಗಿ ಪ್ರಜ್ಞಾವಂತ ಸಮಾಜ ಒಟ್ಟಾಗಿ ಕೆಲಸ ಮಾಡಬೇಕು ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ಲೀಮ್ ಹೇಳಿದರು.

ಅವರು ಮಂಗಳವಾರ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಶ್ರೀಕೃಷ್ಣ ರಾವ್ ಎಂಬಾತನ ಅಕ್ರಮ ಗರ್ಭ ಮತ್ತು ವಂಚನೆ ಪ್ರಕರಣದ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಶಾಹಿದ ತಸ್ಲೀಮ್ ಅವರು ಬ್ರಾಹ್ಮಣ್ಯವನ್ನು ಸಂರಕ್ಷಿಸಲು ಸಂಘ ಪರಿವಾರ ಮತ್ತು ಬಿಜೆಪಿ ಕೆಲಸ ಮಾಡುತ್ತಿದೆ. ಇಲ್ಲಿ ಜಾತಿ, ಧರ್ಮ ನೋಡಿಕೊಂಡು ಮೇಲ್ವರ್ಗಕ್ಕೊಂದು ನ್ಯಾಯ ಕೆಲ ವರ್ಗಕ್ಕೊಂದು ನ್ಯಾಯದ ರೀತಿ ಇದೆ. ಅದು ನಿಲ್ಲಬೇಕು. ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ. ಹಿಂದೂ ಧರ್ಮ ಅಂದ್ರೆ ಸರ್ವೋ ಜನ ಸುಖಿನೋ ಭವಂತೋ, ವಸುದೈವ ಕುಟುಂಬಕ ಅಂತ ಹೇಳುವ ಧರ್ಮ. ಅದನ್ನ ಈ ಹಿಂದುತ್ವವಾದಿಗಳು ಜಾತಿ ನೋಡಿಕೊಂಡು ಬ್ರಾಹ್ಮಣ್ಯ ವನ್ನು ಸಂರಕ್ಷಿಸುವ ಸಲುವಾಗಿ ಈ ರೀತಿ ಮಾಡುತ್ತಾ ಇದ್ದಾರೆ. ಭೂಮಾತೆ, ಗೋತಾಯಿ, ಮಾತೆಯ ಸಂಸ್ಕೃತಿ ನಮ್ಮದು ಅಂತೆಲ್ಲ ಹೇಳಿ ನೈಜ ಮಾತೆಗೆ ಅನ್ಯಾವಾದಾಗ ಬೆಂಬಲವಾಗಿ ನಿಲ್ಲದೆ, ಪ್ರಭಾವಿ ಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಎಲ್ಲಿಯವರೆಗೂ ಇದು ಮುಂದುವರಿದಿದೆ ಅಂದ್ರೆ ಸಂತ್ರಸ್ತೆಯ ತಾಯಿ ವಿವಿಧ ಹಿಂದುತ್ವ ನಾಯಕರ ಭೇಟಿ ಮಾಡಿದರೂ ಕೂಡ ಬೆಂಬಲ ಸಿಕ್ಕಿಲ್ಲ. ಕೊನೆಗೆ ಎಸ್ ಡಿಪಿಐ ಸಂತ್ರಸ್ತೆಯ ಪರವಾಗಿ ಪ್ರತಿಭಟಿಸಿದರ ಪರಿಣಾಮ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಆದ್ರೆ ಕೆಲವರು ಈ ವಿಚಾರವನ್ನ ರಾಜಕೀಯ ಮೈಲೇಜ್ ಪಡೆಯಲು ಬಂದಿದ್ದಾರೆ. ಎಸ್ ಡಿಪಿಐ ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಯಾರಿಗೆ ಅನ್ಯಾಯವಾಗುತ್ತೋ ಅವರ ಪರವಾಗಿ ನಿಲ್ಲುತ್ತದೆ. ಈ ಪ್ರಕರಣವನ್ನು ರಾಜಕೀಯವಾಗಿ ನೋಡದೆ ಓರ್ವ ಮಹಿಳೆಗೆ ಆದ ಅನ್ಯಾಯ ಅಂತ ತಿಳಿದುಕೊಂಡು ಎಲ್ಲರೂ ಬೆಂಬಲವಾಗಿ ನಿಂತು ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ವಿಮೆನ್ ಇಂಡಿಯಾ ಮೂಮೆಂಟ್ ಝಹನ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯೆ ಝೀನತ್, ಪುತ್ತೂರು ನಗರಸಭಾ ಸದಸ್ಯೆ ಝೊಹರಾ ಬನ್ನೂರು, ಜಿಲ್ಲಾ ಸಮಿತಿ ಸದಸ್ಯರಾದ ಶಿನೀರ, ಝೈನಬ, ಫೌಝಿಯಾ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಮಂಗಳೂರು ಗ್ರಾಮಾಂತರ ಜಿಲ್ಲೆ ಜೊತೆ ಕಾರ್ಯದರ್ಶಿ ಹನೀಫ್ ಪೂಜಾಲಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News