ಕಾಪು| ಎಸ್‌ವೈಎಸ್ ವತಿಯಿಂದ 'ಸೌಹಾರ್ದ ಸಂಚಾರ'
ಕಾಪು: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲ ಜಾತಿ, ಮತಗಳ ಜನರನ್ನು ಸೇರಿಸಿ ನಡೆಸುವ 'ಸೌಹಾರ್ದ ಸಂಚಾರ'ವು ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಕಾಪುವಿನಲ್ಲಿ ನಡೆಯಿತು.
ಕಾಪುನಲ್ಲಿ ನಡೆದ ಜಾಥಾ ಮತ್ತು ಸಾರ್ವಜನಿಕ ಸಭೆಯಲ್ಲಿ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಸಂದೇಶ ಭಾಷಣ ಮಾಡಿದರು. ಶೈಖುನಾ ಅಹ್ಮದ್ ಮುಸ್ಲಿಯಾರ್ ಕಾಪು ಖಾಝಿ, ರೆ.ಫಾ. ಅನಿಲ್ ರೋಡ್ರಿಗಸ್ ಸಾವೂದ್ ಮಾಯ್ ಚರ್ಚ್ ಶಿರ್ವ, ದೇವಿಪ್ರಸಾದ್ ಶೆಟ್ಟಿ ಬೆಳಪು, ಬಂಟರ ಸಂಘ ಪಡುಬಿದ್ರೆ ಅಧ್ಯಕ್ಷ, ಯೋಗೀಶ್ ಶೆಟ್ಟಿ ಕಾಪು ಅಧ್ಯಕ್ಷರು, ಜನತಾದಳ ಉಡುಪಿ ಜಿಲ್ಲೆ, ಮೊಹಿದ್ದೀನ್ ಪಡುಬಿದ್ರೆ ನಿವೃತ್ತ ಬಿ.ಎಸ್.ಎಫ್. ಯೋಧರು, ಸಾದಿಕ್ ಕೆ.ಪಿ. ಎಸ್.ಡಿ.ಪಿ.ಐ. ಮಲ್ಲಾರು ಅಧ್ಯಕ್ಷರು ಮೊದಲಾದವರು ಮಾತನಾಡಿದರು.
ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಫಾರೂಕ್ ಚಂದ್ರನಗರ, ಭಾಸ್ಕರ್ ಕುಮಾರ್ ಮಜೂರು ಗ್ರಾಮ ಪಂಚಾಯತ್, ರವೀಂದ್ರ ಮಲ್ಲಾರ್ ರಾಣೆಯಾರ್ ಸಮಾಜ ಮುಖಂಡರು, ದೀಪಕ್ ಕುಮಾರ್ ಎರ್ಮಾಳು ಸಮಾಜ ಸೇವಕರು, ಶರ್ಪುದ್ದೀನ್ ಶೇಖ್ ಅಧ್ಯಕ್ಷರು ಅಲ್ಪಸಂಖ್ಯಾತರ ಘಟಕ ಉಡುಪಿ ಜಿಲ್ಲೆ, ಎಂ.ಎ. ಗಫೂರ್ ಮೂಳೂರು, ಉದ್ಯಮಿ ನಾಸೀರ್, ನಿಯಾಝ್ ಪಡುಬಿದ್ರಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷರುಗಳಾದ ಸೈಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಸೈಯದ್ ಶಾಫೀ ನಈಮೀ ತಂಙಳ್ ಮಾರ್ನಹಳ್ಳಿ, ಸೈಯದ್ ಹಾಮಿಮ್ ತಂಙಳ್ ಚಿಕ್ಕಮಂಗಳೂರು, ಇಬ್ರಾಹಿಂ ಸಖಾಫಿ ಪಯೋಟ, ಇಸ್ಹಾಖ್ ಝುಹ್ರಿ ಕಾನಕೆರೆ, ಮಹ್ಬೂಬ್ ಸಖಾಫಿ ಕಿನ್ಯ, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಅಶ್ರಫ್ ಎಮ್ಮೆಮಾಡು, ಅತ್ತಾವುಳ್ಳ ಮೈಸೂರು, ಇಬ್ರಾಹಿಂ ಮೂಡಿಗೆರೆ, ಸಲೀಂ ಕನ್ಯಾಡಿ, ಕಲಂದರ್ ಕಕ್ಕೆಪದವು, ಯಾಕೂಬ್ ಸಅದಿ ನಾವೂರು, ನವಾಝ್ ಸಖಾಫಿ ಅಡ್ಯಾರ್, ಫಾರೂಕ್ ಶೇಡಿಗುರಿ ಮೊದಲಾದವರು ಉಪಸ್ಥಿತರಿದ್ದರು.
ಎಂ.ಸಲೀಂ ಪಕೀರ್ಣಕಟ್ಟೆ ಸ್ವಾಗತಿಸಿದರು. ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಾರ್ಯಕ್ರಮ ನಿರೂಪಿಸಿದರು. ಎಂ.ಕೆ ಇಬ್ರಾಹಿಂ ಮಜೂರು ವಂದಿಸಿದರು.