ಮೈಸೂರು ದಸರಾದಲ್ಲಿ ಸಂದೀಪ್ ದೇವಾಡಿಗರಿಂದ ಸ್ಯಾಕ್ಸೋಫೋನ್ ಕಛೇರಿ ಕಾರ್ಯಕ್ರಮ
Update: 2025-09-21 23:14 IST
ಸಂದೀಪ್ ದೇವಾಡಿಗ
ಮಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರುನಾಡ ಕಲ್ಪತರು ರಾಜ್ಯ ಪ್ರಶಸ್ತಿ ವಿಜೇತ ಸಂದೀಪ್ ದೇವಾಡಿಗ ಅರಿಯಡ್ಕ ಅವರ ತಂಡವು ಸ್ಯಾಕ್ಸೋಫೋನ್ ಕಛೇರಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ನಾಡಹಬ್ಬದ ವಿಶೇಷ ಕಾರ್ಯಕ್ರಮವಾಗಿ ಸೆ.30 ರ, 2025ರಂದು ಸಂಜೆ 5 ಗಂಟೆಗೆ ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ಸಂದೀಪ್ ದೇವಾಡಿಗ ಅವರ ಸ್ಯಾಕ್ಸೋಫೋನ್ ಕಛೇರಿ ಜರುಗಲಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಸಂದೀಪ್ ದೇವಾಡಿಗ, ರಾಜ್ಯ ಹಾಗೂ ದೇಶದಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಸ್ಯಾಕ್ಸೋಫೋನ್ ವಾದನ ನೀಡಿದ್ದು, ಸಂಗೀತ ಪ್ರಿಯರಿಂದ ಅಪಾರ ಮೆಚ್ಚುಗೆ ಪಡೆದಿದ್ದಾರೆ.