ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ ಕಾರ್ಯಕ್ರಮ
Update: 2024-07-15 11:48 IST
ಮಂಗಳೂರು: ಬರಕಾ ಇಂಟರ್ನ್ಯಾಷನಲ್ ಸ್ಕೂಲ್, ಅಡ್ಯಾರ್ ಇದರ 2024 - 25 ನೇ ಸಾಲಿನ ಶಾಲಾ ಸಂಸತ್ತಿನ ಪ್ರಮಾಣ ವಚನ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಹಮ್ಮದ್ ಕುಂಞಿ, ಜಿ. ಮುಹಮ್ಮದ್ ಹನೀಫ್, ಅಬ್ದುಲ್ ಲತೀಫ್ ಕುದ್ರೋಳಿ, ಝಾಹಿದ ಅಬ್ದುಲ್ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ನರ್ಗೀಸ್ ರವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅತಿಥಿಗಳು ನಾಯಕತ್ವದ ಮಹತ್ವದ ಬಗ್ಗೆ ವಿವರಣೆ ನೀಡಿದರು.
ನೂತನ ಚುನಾಯಿತ ವಿದ್ಯಾರ್ಥಿ ನಾಯಕರಿಗೆ ಅತಿಥಿಗಳಿಂದ ಅಧಿಕಾರ ಹಸ್ತಾಂತರ ನಡೆಯಿತು. ಇಸ್ಲಾಮಿಕ್ ವಿಭಾಗದ ಪ್ರಾಂಶುಪಾಲ ಹನೀಫ್ ಬೋಳಂತೂರು ಅವರು ಶಾಲಾ ಸಂಸತ್ತಿನ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಶಾಲಾ ಉಪ-ಪ್ರಾಂಶುಪಾಲೆ ಸೌಸ್ರೀನ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಿಕ್ಷಕಿಯರಾದ ರಮ್ಲತ್ ಹಾಗೂ ಸಾಜಿದರವರು ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.