×
Ad

ಸೆ.5: ಸ್ಪೀಕರ್ ಯು.ಟಿ. ಖಾದರ್ ಹಾಗೂ ಸಚಿವರುಗಳಿಗೆ ಸನ್ಮಾನ; ಅಭಿನಂದನಾ ಸಮಿತಿಯ ಪೂರ್ವಭಾವಿ ಸಭೆ

Update: 2023-08-31 19:02 IST

ಯು.ಟಿ. ಖಾದರ್, ಝಮೀರ್ ಅಹ್ಮದ್ ಖಾನ್, ರಹೀಂ ಖಾನ್

ಮಂಗಳೂರು, ಆ.31: ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಅಭಿನಂದನಾ ಸಮಿತಿಯ ಸಹಭಾಗಿತ್ವದಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್ ಮತ್ತು ವಸತಿ, ವಕ್ಫ್ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿಝಡ್ ಝಮೀರ್ ಅಹ್ಮದ್ ಖಾನ್, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮವು ಸೆಪ್ಟೆಂಬರ್ 5ರಂದು ನಗರದ ಪುರಭವನದಲ್ಲಿ ನಡೆಯಲಿದೆ.

ಆ ಹಿನ್ನೆಲೆಯಲ್ಲಿ ನಗರದ ಕೊಡಿಯಾಲ್‌ಬೈಲ್‌ನ ಯೆನೆಪೋಯ ಆಸ್ಪತ್ರೆಯ ಸಮ್ಮೇಳನದ ಸಭಾಂಗಣದಲ್ಲಿ ಮಾಜಿ ಮುಖ್ಯ ಸಚೇತಕ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್‌ರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಿತಿಯ ಪೂರ್ವಭಾವಿ ಸಭೆಯು ಮಂಗಳವಾರ ನಡೆಯಿತು.

ಅಭಿನಂದನಾ ಸಮಿತಿಯ ಅಧ್ಯಕ್ಷರಾಗಿ ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ವೈಅಬ್ದುಲ್ಲ ಕುಂಞಿ ಹಾಗೂ ಸಂಚಾಲಕರಾಗಿ ಎಸ್‌ಎಂಆರ್ ಗ್ರೂಪ್‌ನ ಎಸ್.ಎಂ.ರಶೀದ್ ಹಾಜಿ ಮತ್ತು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಆಯ್ಕೆಯಾಗಿರುತ್ತಾರೆ.

ಅಭಿನಂದನಾ ಸಮಿತಿಯ ಸದಸ್ಯರುಗಳಾಗಿ ಯು.ಟಿ. ಇಫ್ತಿಕಾರ್ ಫರೀದ್, ಸಿ. ಮಹ್ಮೂದ್ ಹಾಜಿ, ಹಾಜಿ ಇಬ್ರಾಹಿಂ ಕೋಡಿಜಾಲ್ ಮುಮ್ತಾಝ್ ಅಲಿ ಕೃಷ್ಣಾಪುರ, ಅಬುಸೂಫ್ಯಾನ್ ಮದನಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಹನೀಫ್ ಹಾಜಿ ಬಂದರ್, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಉದ್ಯಮಿಗಳಾದ ಮುಹಮ್ಮದ್ ಹಾರಿಸ್ ಮುಕ್ಕ ಫುಡ್ಸ್, ಮನ್ಸೂರ್ ಅಹ್ಮದ್ ಆಝಾದ್, ಶಾಕಿರ್ ಹಾಜಿ, ಹನೀಫ್ ಹಾಜಿ ಗೊಳ್ತಮಜಲ್, ಹಾಜಿ ಕೆ.ಪಿ. ಮಹಮ್ಮದ್ ಪು‌ತ್ತೂರು, ಅಶ್ರ್ರಫ್ ಕಿನಾರ, ರಿಯಾಝ್ ಟ್ಯಾಲೆಂಟ್, ಮಾಜಿ ಮೇಯರ್ ಕೆ. ಅಶ್ರಫ್, ಶಾಹುಲ್ ಹಮೀದ್ ಕೆ.ಕೆ, ಯು.ಬಿ. ಸಲೀಂ, ಎನ್.ಎಸ್. ಕರೀಂ, ಸೈದುದ್ದೀನ್, ಭಾಷಾ ತಂಙಳ್, ಅಬೂಬಕ್ಕರ್ ಗ್ರೂಫ್‌4, ಮುಹಮ್ಮದ್ ಕುಂಞಿ ಶಾಂತಿ ಪ್ರಕಾಶನ, ರಝಾಕ್ ಗೊಳ್ತಮಜಲ್, ಮುಸ್ತಫ ಸುಳ್ಯ, ಅಹಮ್ಮದ್ ಶಾಕಿರ್, ಝುಬೈರ್ ತಂಙಳ್, ನಝೀರ್ ಅವರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News