ಹಿರಿಯ ವೈದ್ಯ ಡಾ.ಟೀಕೆ ಮಹಮೂದ್ ನಿಧನ
Update: 2026-01-07 12:03 IST
ಮಂಗಳೂರು, ಡಿ.7: ಹಿರಿಯ ವೈದ್ಯ ಡಾ.ಟೀಕೆ ಮಹಮೂದ್(82) ಬುಧವಾರ ಮುಂಜಾನೆ ಬೆಳಗ್ಗೆ ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದೀರ್ಘ ಕಾಲ ಬೆಂಗಳೂರಿನಲ್ಲಿ ವೃತ್ತಿಜೀವನ ನಡೆಸಿದ್ದ ಅವರು ಬಳಿಕ ಮಂಗಳೂರಿಗೆ ಮರಳಿದ್ದರು.
ಇವರು ಮಂಗಳೂರು ಮತ್ತು ಬೆಂಗಳೂರಿನ ಪ್ರಸಿದ್ಧ ಇಂಟೀರಿಯರ್ ಡೆಕರೇಶನ್ ಸಂಸ್ಥೆಯ ದಿವಂಗತ ಅಬ್ದುಲ್ ರಹೀಮ್ ಟೀಕೆ ಮತ್ತು ಉಮರ್ ಟೀಕೆ ಅವರ ಹಿರಿಯ ಸಹೋದರ.
ಮಯ್ಯತ್ ಫಳ್ನೀರ್ ನ ಲ್ಲಿರುವ ಬಾಮ್ ಸನ್ ರೆಸಿಡೆನ್ಸಿಯಲ್ಲಿದೆ. ಇಂದು(ಜ.7) ಮಗ್ರಿಬ್ ನಮಾಝ್ ಬಳಿಕ ಜೋಕಟ್ಟೆ ಈದ್ಗಾ ಮಸೀದಿಯ ವಠಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.