×
Ad

ಜ.11 -18: ಮಂಜನಾಡಿ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ವರ್ಷಾವಧಿ ಉತ್ಸವ

Update: 2026-01-08 15:46 IST

ಉಳ್ಳಾಲ: ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ಕ್ಷೇತ್ರದಲ್ಲಿ ಜ.11ರಿಂದ 18ರ ತನಕ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಉತ್ಸವ ಮತ್ತು ಮಹಾರಥೋತ್ಸವವು ಜರುಗಲಿದೆ. ಜ.15ರಂದು ನೂತನ ಮಹಾರಥ, ಪುಷ್ಪರಥ ಹಾಗೂ ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ ಎಂದು ನೂತನ ರಥ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಪೆರಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಾತ್ರೋತ್ಸವ ಪ್ರಯುಕ್ತ ಜ.11ರಂದು ಕುತ್ತಾರು ರಾಜರಾಜೇಶ್ವರಿ ಸಾನಿಧ್ಯದಿಂದ ಅಪರಾಹ್ನ 2:30ಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಜನವರಿ 12 ರಂದು ಬೆಳಗ್ಗೆ 8ರಿಂದ ಸಾಮೂಹಿಕ ರುದ್ರಯಾಗ, ಜನವರಿ 14ರಂದು ಧ್ವಜಾರೋಹಣ, ಜನವರಿ 15ರಂದು ಬಲಿವಾಡು ಸೇವೆ, ಸಂಜೆ 6:30ಕ್ಕೆ ದೊಡ್ಡರಂಗ ಪೂಜೆ, ರಾತ್ರಿ 7ಕ್ಕೆ ಮಹಾರಥ, ಪುಷ್ಪರಥ, ಪಲ್ಲಕ್ಕಿ ಸಮರ್ಪಣೆ, ಸಂಜೆ:7:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8:30ಕ್ಕೆ ಬಲಿ ಉತ್ಸವ, ಪುಷ್ಪ ರಥೋತ್ಸವ ನೆರವೇರಲಿದೆ ಎಂದರು.

ಜ.15ರಂದು ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ರಾಜಕೀಯ, ಧಾರ್ಮಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಜ.16ರಂದು ಸಂಜೆ 7ಕ್ಕೆ ಪಲ್ಲಕ್ಕಿ ಉತ್ಸವ, ಪುಷ್ಪ ರಥೋತ್ಸವ, ಜ.17ರಂದು ಮಧ್ಯಾಹ್ನ 12ಕ್ಕೆ ಮಹಾರಥಾರೋಹಣ, ಸಂಜೆ 6:30ಕ್ಕೆ ಮಹಾರಥೋತ್ಸವ, ಜ.18 ರಂದು ಬೆಳಗ್ಗೆ 8ರಿಂದ ಸಾಮೂಹಿಕ ವಿಷ್ಣುಯಾಗ, ಸಂಜೆ 6:30ರಿಂದ ಯಾತ್ರಾಹೋಮ ನಡೆಯಲಿದೆ. ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ಬಳಿಕ ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆಯೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆನುವಂಶಿಕ ಅರ್ಚಕ ಟಿ.ಸುಬ್ರಹ್ಮಣ್ಯ ಭಟ್, ಟಿ.ವೆಂಕಟೇಶ ಆಚಾರ್ಯ, ಪವಿತ್ರಾ ಪಾಣಿ ಬಲ್ಲಾಳಬೀಡು ಶ್ರೀನಿವಾಸ ಬಲ್ಲಾಳ, ನೂತನ ರಥ ನಿರ್ಮಾಣ ಸಮಿತಿಯ ಅಧ್ಯಕ್ಷ ಮಂಜುನಾಥ ಅಡಪ್ಪ ತೇವುನಾಡುಗುತ್ತು, ಪ್ರಧಾನ ಕಾರ್ಯದರ್ಶಿ ಮಂಜುನಾಥ ಆಳ್ವ ತೇವುನಾಡುಗುತ್ತು, ರಾಮದಾಸ್ ಆಳ್ವ ತೇವುನಾಡುಗುತ್ತು, ನಂದಿನಿ ರಘು ಶೆಟ್ಟಿ ಗುರಿಕಾರಮೂಲೆ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸುಕೇಶ್ ಮಂಜನಾಡಿ, ವಸಂತ ಕೋಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News