ಎಸ್‌ಕೆಎಸ್‌ಬಿವಿ ಉಪ್ಪಿನಂಗಡಿ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳಿಗೆ ತಹ್ದೀಸ್-2k25-26 ಕಾರ್ಯಕ್ರಮ
ಉಪ್ಪಿನಂಗಡಿ : ನೂರಾನಿಯ್ಯ ಕುದ್ಲೂರು ಮದ್ರಸದಲ್ಲಿ 2025-26ನೇ ಸಾಲಿನ ಉಪ್ಪಿನಂಗಡಿ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ SKSBV ತಹ್ದೀಸ್ ಕಾರ್ಯಕ್ರಮವು ಜೂ.22ರ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಮಸ್ತ ಮುದರ್ರಿಬ್ ಹಾಶಿಂ ರಹ್ಮಾನಿ ಸಾಲ್ಮರ ಸಂಘಟನಾ ಸಬಲೀಕರಣ ತರಗತಿ ಹಾಗೂ CA ರ‍್ಯಾಂಕ್ ಖ್ಯಾತಿಯ C A ಮುಹಮ್ಮದ್ ತಾಬಿಷ್ ಹಸನ್ ಕುದ್ಲೂರು ವ್ಯಕ್ತಿತ್ವ ವಿಕಸನ ಎಂಬ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು.
ಅಧ್ಯಕ್ಷರಾಗಿ ಕರಾಯ ಮದ್ರಸ ಸಲ್ಮಾನ್, ಉಪಾಧ್ಯಕ್ಷರಾಗಿ ಬಂಗೇರಕಟ್ಟೆ ಮದ್ರಸದ ಸಾನಿಫ್, ಮಠ ಮದ್ರಸದ ಕೋಲ್ಪೆ ಮದ್ರಸದ ಹಾಶಿರ್, ಪ್ರಧಾನ ಕಾರ್ಯದರ್ಶಿಯಾಗಿ ಕುದ್ಲೂರು ಮದ್ರಸದ ಸುಜಾನ್ , ವರ್ಕಿಂಗ್ ಕಾರ್ಯದರ್ಶಿಯಾಗಿ ಉಪ್ಪಿನಂಗಡಿ ಮದ್ರಸದ ಕೈಸ್, ಜೊತೆ ಕಾರ್ಯದರ್ಶಿಯಾಗಿ ಕರುವೇಲು ಮದ್ರಸದ ಅಫೀಝ್, ಕೊಕ್ಕಡ ಮದ್ರಸದ ಮುಆದ್ , ಬೋಳದಬೈಲ್ ಮದ್ರಸದ ಬಾಹಿಶ್, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಬಂಡಾಡಿ ಮದ್ರಸ, ಹಾಗೂ ಕೊಚ್ಚಿಲ ಮದ್ರಸದ ಅದಬ್ ಶಿಫ್ನಾನ್, ಆದರ್ಶ ನಗರ ಮದ್ರಸದ ಖಿದ್ಮ ಹಾಫಿಲ್, ಹಳೆಗೇಟು ಮದ್ರಸದ ಅಲಿಫ್ ಸಹದ್, ಟೆಕ್ ಆದಿಲ್ ಅಡೆಕ್ಕಲ್ ಮದ್ರಸ ಇವರುಗಳನ್ನು ಸಂಚಾಲಕರಾಗಿ ಹಾಗೂ ಉಳಿದ ಎಲ್ಲಾ ಮದ್ರಸಗಳ ಅಧ್ಯಕ್ಷರನ್ನು ಸಮಿತಿ ಸದಸ್ಯರಾಗಿ ಆಯ್ಕೆಮಾಡಲಾಯಿತು.
ಖಿರಾಅತ್ ಪಠಣ ಸ್ಪರ್ಧೆಯಲ್ಲಿ ಶಾಖಿರ್ ಕುದ್ಲೂರು ಮದ್ರಸ ಪ್ರಥಮ, ಹಾಶಿರ್ ಕೋಲ್ಪೆ ಮದ್ರಸ ದ್ವಿತೀಯ, ತೃತೀಯ ಬಹುಮಾನ ಹಾಶಿಂ ಮಠ ಮದ್ರಸ ಪಡೆದರು. ಈ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಬಹು ಇಸ್ಹಾಕ್ ಫೈಝಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಸ್ಮಾನ್ ದಾರಿಮಿ ಹಳೆಗೇಟು ಪ್ರಾರ್ಥನೆ ಗೈದರು. SKSBV ರೇಂಜ್ ಚೆಯರ್ಮಾನ್ ಮುಸ್ತಫಾ ಫೈಝಿ ಬೋಳದಬೈಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕುದ್ಲೂರು ಮಸೀದಿ ಮದ್ರಸ ಅಧ್ಯಕ್ಷರಾದ ಕರಾವಳಿ ಹಮೀದ್, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ, ಕಾರ್ಯದರ್ಶಿ ಅಬ್ದುಲ್ ಅಝೀಝ್ ಫೈಝಿ, ಸ್ವದೇಶ ರೇಂಜ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಫೈಝಿ, ಹಲವು ಮದ್ರಸಗಳ ಸದರ್ ಉಸ್ತಾದರುಗಳು, SKSBV ಮದ್ರಸ ಚೆಯರ್ಮಾನ್ ಕನ್ವೀನರ್ ಗಳು ಹಲವಾರು ಮಂದಿ ಭಾಗವಹಿಸಿದ್ದರು.
ಕುದ್ಲೂರು ಜಮಾಅತ್ ಆಡಳಿತ ಸಮಿತಿ ನೇತಾರರು, ಸದರ್ ಉಸ್ತಾದ್ ಸಿನಾನ್ ರಹ್ಮಾನಿ ಯಂಗ್ ಮೆನ್ಸ್ ಪದಾಧಿಕಾರಿಗಳು, SKSBV ಕುದ್ಲೂರು ಮದ್ರಸ ವಿದ್ಯಾರ್ಥಿ ಕಾರ್ಯಕ್ರಮ ನಡೆಸಿಕೊಟ್ಟರು. SKSBV ಜನರಲ್ ಕನ್ವೀನರ್ ಹಸನ್ ಅದ್ನಾನ್ ಅನ್ಸಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.