ಎಸೆಸೆಲ್ಸಿ ಫಲಿತಾಂಶ: ಪ್ರಥಮ ಸ್ಥಾನ ಪಡೆದ ದ.ಕ. ಜಿಲ್ಲೆ
Update: 2025-05-02 14:47 IST
ಮಂಗಳೂರು, ಮೇ 2: ಪ್ರಸಕ್ತ (2024-25) ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 91.12 ಫಲಿತಾಂಶದೊಂದಿಗೆ ಮತ್ತೆ ಟಾಪ್ 1 ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಕಳೆದ ವರ್ಷದ ಫಲಿತಾಂಶದಲ್ಲಿ 2ನೇ ಸ್ಥಾನದಲ್ಲಿದ್ದ ಜಿಲ್ಲೆ 2024-25ನೇ ಸಾಲಿನಲ್ಲಿ ಮೊದಲ ಸ್ಥಾನಕ್ಕೇರಿದೆ. ಕಳೆದ ಸಾಲಿನಲ್ಲಿ ಶೇ.92.12 ಫಲಿತಾಂಶ ದಾಖಲಾಗಿತ್ತು.
2022-23ನೇ ಎಸೆಸೆಲ್ಸಿ ಫಲಿತಾಂಶದಲ್ಲಿ ದ.ಕ. ಜಿಲ್ಲೆ ಎ ಗ್ರೇಡ್ ನೊಂದಿಗೆ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ವರ್ಷವನ್ನು ಹೊರತುಪಡಿಸಿ ಹಿಂದಿನ ಕೆಲ ವರ್ಷಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದುಳಿದಿದ್ದ ದ.ಕ. ಜಿಲ್ಲೆ ಕಳೆದ ವರ್ಷದಿಂದ ಮತ್ತೆ ಚೇತರಿಸಿಕೊಂಡು, ಈ ವರ್ಷ ಮತ್ತೆ ಟಾಪ್ 1 ಸ್ಥಾನವನ್ನು ಪಡೆಯುವಲ್ಲಿ ಸಫಲವಾಗಿದೆ.
ವರ್ಷ | ಶೇ. | ಸ್ಥಾನ |
2014 | 81.74 | 7 |
| 2015 | 89.70 | 8 |
| 2016 | 88.30 | 3 |
| 2017 | 82.39 | 2 |
| 2018 | 86.26 | 4 |
| 2019 | 88.01 | 7 |
| 2020 | 81.28 | 7 |
| 2021 | 100 | 'A' |
| 2022 | 88.63 | 21 |
| 2023 | 89.52 | 17 |
| 2023-24 | 92.12 | 2 |
2024-25 | 91.12 | 1 |