×
Ad

ಸುರತ್ಕಲ್: ಹಿಮ್ಮುಖವಾಗಿ ಚಲಿಸಿದ ಲಾರಿ; ಓರ್ವನಿಗೆ ಗಂಭೀರ ಗಾಯ

Update: 2023-11-07 18:26 IST

ಸುರತ್ಕಲ್: ಲಾರಿಯೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ನಾಲ್ಕು ಕಾರುಗಳು ಮತ್ತು ದ್ವಿಚಕ್ರ ವಾಹನ ಹಾಗೂ ಬಟ್ಟೆ ಮಳಿಗೆಯೊಂದು ಜಖಂಗೊಂಡಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಮಂಗಳೂರು ನೋಂದಣಿಯ ಸರಕು ಹೇರಿಕೊಂಡಿದ್ದ ಲಾರಿ ರೋರೋ ರೈಲಿನಲ್ಲಿ ತೆರಳುವ ಸಲುವಾಗಿ ಸುರತ್ಕಲ್ ಪೇಟೆಯಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹೊರಗೆ ತೆರಳಿದ್ದ ಎನ್ನಲಾಗಿದೆ.

ಭಾರತ್ ಪೆಟ್ರೋಲ್ ಬಂಕ್‌ ಬಳಿ ನಿಲ್ಲಿಸಲಾಗಿದ್ದ ಲಾರಿ ಯುಟರ್ನ್ ನಲ್ಲಿ ಹಿಮ್ಮುಖವಾಗಿ ಚಲಿಸಿ ಮೂಡ ಮಾರುಕಟ್ಟೆಯ ಪಾರ್ಕಿಂಗ್ ನಲ್ಲಿ‌ ನಿಲ್ಲಿಸಲಾಗಿದ್ದ ಕಾರುಗಳಿಗೆ ಢಿಕ್ಕಿ ಹೊಡೆದಿದೆ.

ಕಾರಿನ ಬಳಿ ನಿಂತಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರ ಪೊಲೀಸರು ಸ್ಥಳಲ್ಲೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.












 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News