ಕೇರಳ ಯಾತ್ರೆ ಯಶಸ್ವಿಗೆ ಎಸ್ ವೈ ಎಸ್ ಕರೆ
ಮಂಗಳೂರು: ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ನೇತೃತ್ವದಲ್ಲಿ ಮುಸ್ಲಿಂ ಜಮಾಅತ್ ಸಂಘಟಿಸುತ್ತಿರುವ ಎರಡು ವಾರಗಳ ಕೇರಳ ಯಾತ್ರೆಗೆ ಜ. 1ರಂದು ಉಳ್ಳಾಲ ದರ್ಗಾ ಶರೀಫ್‌ನಲ್ಲಿ ಚಾಲನೆ ದೊರೆಯಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕರೆ ನೀಡಿದೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ, ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಸೈಯದ್ ಖಲೀಲುಲ್ ಬುಖಾರಿ, ಸಮಸ್ತ ಕೇರಳ ಜಂಇಯತುಲ್ ಉಲಮಾ ಅಧ್ಯಕ್ಷ ರಈಸುಲ್ ಉಲಮಾ, ಉಪಾಧ್ಯಕ್ಷ ಸೈಯದ್ ಆಟಕ್ಕೋಯ ತಂಙಳ್ ಕುಂಬೋಲ್, ಕಾರ್ಯದರ್ಶಿ ಪೇರೋಡ್ ಉಸ್ತಾದ್, ಕರ್ನಾಟಕ ಜಂಇಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1ಗಂಟೆಗೆ ಉಳ್ಳಾಲದಲ್ಲಿ ಝಿಯಾರತ್ ನಡೆಯಲಿದ್ದು, ಎರಡು ಗಂಟೆಗೆ ತಲಪಾಡಿಯಲ್ಲಿ ಕೇರಳ ಯಾತ್ರಾ ತಂಡಕ್ಕೆ ಬೀಳ್ಕೊಡಲಾಗುವುದು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.