×
Ad

ಏಕಾಏಕಿ ಉಕ್ಕಿ ಹರಿದ ಫಲ್ಗುಣಿ ನದಿ; ಅಮ್ಮುಂಜೆ ಗ್ರಾಮದ ಹಲವು ಮನೆಗಳು ಜಲಾವೃತ

Update: 2024-08-01 10:29 IST

ಮಂಗಳೂರು: ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಫಲ್ಗುಣಿ ನದಿ ತುಂಬಿ ಹರಿದು ಹಲವು ಮನೆಗಳಿಗೆ ನೀರು ನುಗ್ಗಿದೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹಲವು ಮನೆಗಳು ಜಲಾವೃತಗೊಂಡಿದೆ.

ಅಮ್ಮುಂಜೆಯ ಸೋಮನಾಥೇಶ್ವರ ದೇಗುಲಕ್ಕೆ ನೀರು ನುಗ್ಗಿದೆ.  ಸಂತ್ರಸ್ತರನ್ನುಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಕಾರ್ಯಚರಣೆ ನಡೆಯುತ್ತಿದೆ. ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರು ಹರಿದದ್ದು ಪ್ರವಾಹಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ತಂಡ, ಅಧಿಕಾರಿಗಳ ತಂಡ ಅಗಮಿಸಿದ್ದು ಕಾರ್ಯಚರಣೆ ನಡೆಸುತ್ತಿದ್ದಾರೆ. 

ಫಲ್ಗುಣಿ ನದಿ ಯಲ್ಲಿ ನೀರಿನ ಪ್ರಮಾಣ ಏರಿಕೆ ಆದ ಕಾರಣ ವಾಮಂಜೂರು, ಗುರುಪುರ ಪ್ರದೇಶಗಳು ಜಲಾವೃತವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News