×
Ad

ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕರೆ

Update: 2023-10-10 20:52 IST

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸು ವಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಕರೆ ನೀಡಿದ್ದಾರೆ.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ನಿಟ್ಟಿಯಲ್ಲಿ ಈಗಿನಿಂದಲೇ ಶ್ರಮವಹಿಸಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು. ತಟಸ್ಥರಾಗಿರುವವರನ್ನು ಹೊರ ಗಿಟ್ಟು ಹೊಸ ಬೂತ್ ಕಮಿಟಿ ರಚಿಸಬೇಕಾಗಿದೆ. ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬ್ಲಾಕ್ ಕಾಂಗ್ರೆಸ್‌ನಿಂದ ಹೆಚ್ಚು ನೋಂದಣಿ ಮಾಡಬೇಕು. ಜಿಲ್ಲಾ ಅಲ್ಪಸಂಖ್ಯಾತ ಘಟಕದಿಂದ ಅ.೧೮ರಂದು ಬೆಳಗ್ಗೆ ೧೦ ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕರ್ತರ ಸಮಾವೇಶ, ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಾಯಕರಾದ ಇಬ್ರಾಹೀಂ ಕೋಡಿ ಜಾಲ್, ಶಶಿಧರ್ ಹೆಗ್ಡೆ, ರಕ್ಷಿತ್ ಶಿವರಾಂ, ಶಿಕ್ಷಕರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಂಜೇಶ್ ಬಿ.ಆರ್, ಮಮತಾ ಗಟ್ಟಿ, ಪದ್ಮರಾಜ್. ಆರ್, ಶಾಲೆಟ್ ಪಿಂಟೊ, ಸದಾಶಿವ ಉಳ್ಳಾಲ್, ಶಾಹುಲ್ ಹಮೀದ್, ಬಿ.ಎಂ.ಅಬ್ಬಾಸ್ ಅಲಿ, ನಾರಾಯಣ್ ನಾಯ್ಕ್, ಪ್ರವೀಣ್ ಚಂದ್ರ ಆಳ್ವ, ಸುಹಾನ್ ಆಳ್ವ, ಶುಭಾಷ್ ಚಂದ್ರ ಶೆಟ್ಟಿ, ಲಾರೆನ್ಸ್ ಡಿಸೋಜ, ಉಲ್ಲಾಸ್ ಕೋಟ್ಯಾನ್, ಅಲಿಸ್ಟರ್ ಡಿಕುನ್ಹ, ಸುದರ್ಶನ್ ಜೈನ್, ಹೇಮನಾಥ್ ಶೆಟ್ಟಿ ಕಾವು, ಪಿಯೂಸ್ ರೋಡ್ರಿಗಸ್, ಆರ್.ಕೆ.ಪೃಥ್ವಿರಾಜ್, ಪದ್ಮನಾಭ ನರಿಂಗಾನ, ಅಬ್ದುಲ್ ರವೂಫ್, ಮುಹಮ್ಮದ್ ಬಡಗನ್ನೂರ್,ಪದ್ಮಪ್ರಸಾದ್ ಜೈನ್, ವಸಂತ್ ಬೆರ್ನಾಡ್, ಸುರೇಂದ್ರ ಕಂಬಳಿ, ಜೆ.ಅಬ್ದುಲ್ ಸಲೀಂ, ಮೋಹನ್ ಕೋಟ್ಯಾನ್, ಬೇಬಿ ಕುಂದರ್, ಪುರುಷೋತ್ತಮ ಚಿತ್ರಾಪುರ, ವಿಶ್ವನಾಥ ರೈ ಪುತ್ತೂರು, ಸುದೀಪ್ ಶೆಟ್ಟಿ ಪಾಣೆಮಂಗಳೂರು, ಪ್ರಕಾಶ್ ಸಾಲ್ಯಾನ್, ಸುಧೀರ್ ಶೆಟ್ಟಿ ಕಡಬ, ಡಾ.ರಾಜರಾಂ ವಿಟ್ಲ, ನಾಗೇಶ್ ಗೌಡ ಬೆಳ್ತಂಗಡಿ, ಸತೀಶ್ ಕಾಶಿಪಟ್ಣ, ನೀರಜ್ ಚಂದ್ರಪಾಲ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕ್ಕಿಂ ಡಿಸೋಜ ಸ್ವಾಗತಿಸಿದರು. ಸಭೆ ಆರಂಭಕ್ಕೂ ಮುನ್ನ ಇತ್ತೀಚಿಗೆ ಅಗಲಿದ ಶ್ಯಾಮ ರಾಯ ಸುವರ್ಣ ಸುರತ್ಕಲ್, ಬಸ್ ಮಾಲಕ ಪ್ರಕಾಶ ಶೇಖ ಅವರಿಗೆ ಸಂತಾಪ ಸೂಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News