×
Ad

ಉಪ್ಪಿನಂಗಡಿ ಸಹಕಾರಿ ಸಂಘಕ್ಕೆ ಸರಕಾರ ನಾಮನಿರ್ದೇಶನ ಮಾಡದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ

Update: 2025-12-04 00:05 IST

ಉಪ್ಪಿನಂಗಡಿ, ಡಿ.3: ಸಹಕಾರಿ ವ್ಯವಸಾಯಿಕ ಸಂಘ ನಿ. ಉಪ್ಪಿನಂಗಡಿ ಇದಕ್ಕೆ ಸರಕಾರ ಸದಸ್ಯರನ್ನು ನಾಮ ನಿರ್ದೇಶನ ಮಾಡದಂತೆ ಕರ್ನಾಟಕ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ.

ರಾಜ್ಯ ಸರಕಾರ ಸಹಕಾರಿ ಕಾಯ್ದೆಗೆ ತಿದ್ದುಪಡಿ ಮಾಡಿ ಮೂವರು ಸದಸ್ಯರನ್ನು ಸಹಕಾರಿ ಸಂಘಕ್ಕೆ ನಾಮನಿರ್ದೇಶನ ಮಾಡುವ ಕಾಯ್ದೆಯನ್ನು ತಂದಿತ್ತು. ಇದನ್ನು ಆಕ್ಷೇಪಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷರಾದ ಕೆ.ವಿ.ಪ್ರಸಾದ್, ಕೆ.ಗೋಪಾಲಕೃಷ್ಣ ಭಟ್, ಪೆಲಪ್ಪಾರು ವೆಂಕಟರಮಣ ಭಟ್ ಹಾಗೂ ಸದಸ್ಯ ಅಭಿರಾಮ ಶರ್ಮ ದಾವೆ ಅರ್ಜಿ ಸಲ್ಲಿಸಿದ್ದರು.

ಕೆ.ವಿ.ಪ್ರಸಾದ್ ಮತ್ತಿತರರ ಪರವಾಗಿ ಹೈಕೋರ್ಟ್ ಹಿರಿಯ ವಕೀಲ ಅಗರ್ತ ಕೇಶವ ಭಟ್ ಮಂಡಿಸಿದ ವಾದವನ್ನು ಆಲಿಸಿದ ಹೈಕೋರ್ಟ್ ನಾಮ ನಿರ್ದೇಶನ ಮಾಡದಂತೆ ನ.27ರಂದು ಸರಕಾರಕ್ಕೆ ಸೂಚನೆ ನೀಡಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News