×
Ad

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕ್ರಮಕ್ಕೆ ಸರಕಾರ ಹಿಂದೇಟು ಯಾಕೆ? : ಮುನೀರ್ ಕಾಟಿಪಳ್ಳ

Update: 2023-12-24 22:15 IST

ಮುನೀರ್ ಕಾಟಿಪಳ್ಳ

 ಮಂಗಳೂರು, ಡಿ.24: ವಿವಾದಾತ್ಮಕ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಸರಕಾರ ಯಾಕೆ ಹಿಂಜರಿಯುತ್ತಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ‌‌.

ಮುಸ್ಲಿಂ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯು ಕಾನೂನು ಕ್ರಮಕ್ಕೆ ಅರ್ಹ ಆಗಿಲ್ಲವೆ? ಮುಸಲ್ಮಾನ ಮುಖಂಡನೊಬ್ಬ ಈ ರೀತಿ ಭಿನ್ನ ಧರ್ಮದ ಕುರಿತು ಅಸಭ್ಯವಾಗಿ ಮಾತಾಡಿದ್ದರೆ ಏನೆಲ್ಲ ಸಂಭವಿಸುತ್ತಿತ್ತು ? ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರನ್ನು "ಖುಷಿಪಡಿಸುವ" ಹೇಳಿಕೆಗಳನ್ನು ನೀಡಿ ಬಿಜೆಪಿಗರ ಬಾಯಲ್ಲಿ ಮುಸ್ಲಿಮರನ್ನು ಹೊಲಸು ಮಾತುಗಳ ನಿಂದನೆಗೆ ಗುರಿಪಡಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯರಿಗೆ ಪ್ರಾಮಾಣಿಕತೆ ಇದ್ದರೆ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕಠಿಣ ಸೆಕ್ಷನ್ ಅಡಿ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಲಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.


Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News