×
Ad

ʼಅಧಿಕಾರ ಹಂಚಿಕೆʼ ವಿಚಾರ | ಗೊಂದಲ ಬೇಗ ಬಗೆಹರಿಯುವ ನಿರೀಕ್ಷೆಯಲ್ಲಿದ್ದೇವೆ : ಸತೀಶ್‌ ಜಾರಕಿಹೊಳಿ

Update: 2026-02-09 18:01 IST

ದಾವಣಗೆರೆ : ಅಧಿಕಾರ ಹಂಚಿಕೆಯ ಗೊಂದಲ ಯಾವಾಗ ಬಗೆಹರಿಯುತ್ತದೆ ಎಂದು ನಾವು ಕೂಡಾ ಕಾಯುತ್ತಿದ್ದೇವೆ. ನಿರ್ಧಾರ ಮಾಡುವುದು ಹೈಕಮಾಂಡ್, ಅಲ್ಲಿಯವರೆಗೂ ಕಾಯಬೇಕು. ಯಾಕೆ ತಡವಾಗುತ್ತಿದೆ, ಕಾರಣ ಗೊತ್ತಿಲ್ಲ. ಗೊಂದಲ ಬೇಗ ಬಗೆಹರಿಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಹರಿಹರದ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ʼವ್ಯವಸ್ಥೆಯಲ್ಲಿ ಎಲ್ಲರೂ ಹೈಕಮಾಂಡೇ‌ ಮತ್ತು ದೊಡ್ಡವರೇ. ಇಲ್ಲಿ ಯಾರು ಸಣ್ಣವರು ಎಂದು ಹೇಳುವುದಕ್ಕೆ ಆಗಲ್ಲʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯತೀಂದ್ರಗೆ ʼಹೈಕಮಾಂಡ್ʼ ಎಂದು ತಿರುಗೇಟು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಡಿಕೆಶಿಗೆ 80 ಶಾಸಕರ ಬೆಂಬಲ ಇದೆ ಎಂಬ ಶಾಸಕ ಇಕ್ಬಾಲ್ ಹೇಳಿರಬಹುದು. ಆದರೆ, ಎಂಬತ್ತು ಒಂದು ವಿಷಯವಲ್ಲ. ಯಾರು ಸಮರ್ಥರಿದ್ದಾರೆ, ಯಾರು ಪಕ್ಷ ಮುನ್ನೆಡೆಸುತ್ತಾರೋ ಅವರಿಗೆ ಅವಕಾಶ ಸಿಗುತ್ತೆ. ಆದರೆ, ಆ ಸಂದರ್ಭ ಇನ್ನೂ ಬಂದಿಲ್ಲ. ಬಂದಾಗ ಚರ್ಚೆ ಮಾಡೋಣ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News