ಅಬ್ದುಲ್ ಖಾದರ್ ಬೊಟ್ಟು
Update: 2026-06-14 21:37 IST
ಮಂಗಳೂರು : ಕಣ್ಣೂರು ಕುಂಡಾಲ ಮಸೀದಿ ಮತ್ತು ಮದ್ರಸ ಸಮಿತಿಯ ಉಪಾಧ್ಯಕ್ಷರಾಗಿದ್ದ ಅಬ್ದುಲ್ ಖಾದರ್ ಬೊಟ್ಟು (67) ರವಿವಾರ ನಿಧನರಾದರು. ಪತ್ನಿ, ಐವರು ಪುತ್ರರು ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಮದ್ರಸ ಕಮಿಟಿಯ ಅಧ್ಯಕ್ಷ ಈ.ಕೆ. ರಫೀಕ್, ಕೆಎಸ್‌ಎಚ್ ಹಮೀದ್ ಕಣ್ಣೂರ್, ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್‌ನ ಲತೀಫ್ ಕುಂಡಾಲ, ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ.