ಹೆಜಮಾಡಿ: ದೊಡ್ಡಮನೆ ರಾಮೋಲಾ ಜೆ. ನಿಧನ
Update: 2026-06-12 14:36 IST
ಹೆಜಮಾಡಿ : ದೊಡ್ಡಮನೆ ನಿವಾಸಿ ರಾಮೋಲಾ ಜೆ. ಹೆಜಮಾಡಿ (84) ಅವರು ಜೂನ್ 12ರಂದು ನಿಧನರಾದರು.
1990ರ ದಶಕದಲ್ಲಿ ಹೆಜಮಾಡಿಯ ಮಹಿಳೆಯರನ್ನು ಸಂಘಟಿಸಿ ಜೈ ಕರ್ನಾಟಕ ಮಹಿಳಾ ಮಂಡಳಿಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅನೇಕ ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದರು.
ಅಲ್ಲದೆ, ಅವರು ಹೆಜಮಾಡಿ ಬಿಲ್ಲವರ ಸಂಘದ ಉಪಾಧ್ಯಕ್ಷೆಯಾಗಿ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿಯಾಗಿ ಹಾಗೂ ದಕ್ಷಿಣ ಕನ್ನಡ–ಕಾಸರಗೋಡು ಜಿಲ್ಲಾ ಒಕ್ಕೂಟದ ಜಿಲ್ಲಾ ಮಹಿಳಾ ಸಂಚಾಲಕಿಯಾಗಿ ವಿವಿಧ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.