ಕಡ್ತಲ ವೆಂಕಪ್ಪ ನಾಯ್ಕ್
Update: 2026-06-16 19:43 IST
ಮಂಗಳೂರು, ಜೂ.16: ಕಡ್ತಲ ಗ್ರಾಪಂ, ವರಂಗ ಮಂಡಲದ ಮಾಜಿ ಸದಸ್ಯ, ಕಡ್ತಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಕಡ್ತಲ ವೆಂಕಪ್ಪನಾಯ್ಕ್ (86) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದರು.
ಮೃತರು ಪತ್ನಿ, ಯೋಗ ಸಾಧಕ-ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಸಹಿತ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.