ಡಿ.ಪಿ. ಸಿದ್ದಿಕ್ ಹಾಜಿ

Update: 2026-08-22 19:02 IST

ಬಂಟ್ವಾಳ : ಬಿ.ಸಿ.ರೋಡಿನ ಡಿ.ಪಿ ಸ್ಟೋರ್ ನ ಮಾಲಕ, ಕೆಳಗಿನ ಮಿತ್ತಬೈಲ್ ನಿವಾಸಿ ಮುಹಮ್ಮದ್ ಡಿ ಯಾನೆ ಡಿ.ಪಿ.ಸಿದ್ದಿಕ್ ಹಾಜಿ (64) ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪರ್ಲಿಯಾ ಅರಫಾ ಜುಮಾ ಮಸೀದಿಯ ಅಧ್ಯಕ್ಷರಾಗಿ, ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಕಮಿಟಿಯ ಸದಸ್ಯರಾಗಿ, ಜಮೀಯ್ಯತುಲ್ ಫಲಾಹ್ ನ ಅಜೀವ ಸದಸ್ಯರಾಗಿದ್ದು, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News