ಇಬ್ರಾಹಿಂ ಹಾಜಿ ಕುದ್ದುಪದವು ನಿಧನ

Update: 2026-08-08 12:15 IST

ವಿಟ್ಲ:  ಕುದ್ದುಪದವು ಕಬ್ಬಿನಹಿತ್ಲು ನಿವಾಸಿ ಪ್ರಗತಿಪರ ಕೃಷಿಕರಾದ ಇಬ್ರಾಹಿಂ ಹಾಜಿ THMA (78) ಅವರು ಅಲ್ಪಕಾಲದ ಅಸೌಖ್ಯದಿಂದ ಆ.08 ಶನಿವಾರ ಬೆಳಗ್ಗಿನ ಜಾವ 05:00 ಗಂಟೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಸಿದ್ಧ ಉದ್ಯಮಿ, ಧಾರ್ಮಿಕ ನೇತಾರರಾಗಿದ್ದ ಮರ್ಹೂಮ್ ಅಬ್ಬಾಸ್ ಹಾಜಿ THMA ಉಕ್ಕುಡ ಅವರ ಪುತ್ರರಾಗಿರುವ ಇಬ್ರಾಹಿಂ ಹಾಜಿ "ಉತ್ತಮ ಕೃಷಿಕ ಪ್ರಶಸ್ತಿ"ಗೆ ಭಾಜನರಾಗಿದ್ದರು. ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಇವರು ಸಾಹಿತ್ಯ ಲೋಕದಲ್ಲಿ ಅಪಾರವಾದ ಜ್ಞಾನ ಹೊಂದಿದ್ದರು.

ಮೃತರು ಪತ್ನಿ ನೆಬಿಸಾ ಹಜ್ಜುಮ್ಮ, ಮೂವರು ಪುತ್ರರಾದ ಗಲ್ಫ್ ಉದ್ಯೋಗಿ ಬಶೀರ್, ಉದ್ಯಮಿ ಮಂಗಳಪದವು ಐಡಿಯಲ್ ಫ್ಯುಯೆಲ್ಸ್ ಪೆಟ್ರೋಲ್ ಪಂಪಿನ ಹನೀಫ್ ಕುದ್ದುಪದವು, ಬೆಂಗಳೂರು ಎಮಿರೇಟ್ಸ್ ಗ್ರೂಪ್ ಹೋಟೆಲ್ ಉದ್ಯಮಿ ಮಹಮ್ಮದ್ ಶರೀಫ್, ಇಬ್ಬರು ಪುತ್ರಿಯರಾದ ಸುಹೈಬಾ ಸಕಲೇಶಪುರ ಹಾಗೂ ಸೌದಾ ಬೀವಿ ಪೆರ್ಲ ಅವರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಮಹೇಶ್ ಶೇಕ