ಮಂಜುನಾಥ ಗೋಳಿ

Update: 2026-08-08 20:16 IST

ಉಡುಪಿ, ಆ.8: ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಕರ್ಜೆಯ ಹಿರಿಯ ಸಸ್ಯಶಾಸ್ತ್ರಜ್ಞ ಮಂಜುನಾಥ ಗೋಳಿ (75) ಶುಕ್ರವಾರ ನಿಧನರಾದರು. ಸಾವಿರಾರು ಔಷಧೀಯ ಸಸ್ಯಗಳ ವೈಜ್ಞಾನಿಕ ಮಹತ್ತ್ವವನ್ನು ಅರಿತಿದ್ದ ಇವರು ಸಹಸ್ರಾರು ಸಸ್ಯಗಳ ಕನ್ನಡ, ಆಂಗ್ಲ ಮತ್ತು ಸಂಸ್ಕೃತ ಹೆಸರು ಬಲ್ಲವರಾಗಿದ್ದರು.

ಆಯುರ್ವೇದ ವೈದ್ಯರು, ಪ್ರಾಧ್ಯಾಪಕರು ಆಗಿದ್ದ ಗೋಳಿಯವರು ಸಾವಿರಾರು ಔಷಧೀಯ ಸಸ್ಯಗಳನ್ನು ಬೆಳೆಸಿದ್ದರು. ಪಿಎಚ್‌ಡಿ ಮಾಡುತ್ತಿದ್ದ ಹಲವಾರು ಮಂದಿ ಇವರಿಂದ ಮಾರ್ಗದರ್ಶನವನ್ನು ಪಡೆದಿದ್ದರು. ಇಸ್ರೋ ಸಹಿತ ಹಲವು ಸಂಸ್ಥೆಗಳಿಗೆ ಔಷಧೀಯ ವನ ನಿರ್ಮಿಸಲು ಮಾರ್ಗದರ್ಶನ ನೀಡಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಮಹೇಶ್ ಶೇಕ