ಅನ್ವರ್ ಹುಸೈನ್ (ಸಪ್ಲೈ) ಕೋಟೆಪುರ ನಿಧನ
Update: 2025-04-19 09:22 IST
ಉಳ್ಳಾಲ, ಎ.19: ದ.ಕ. ಜಿಲ್ಲಾ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ, ಸಮಾಜ ಸೇವಕ, ಉಳ್ಳಾಲ ಕೋಟೆಪುರ ನಿವಾಸಿ ಅನ್ವರ್ ಹುಸೈನ್ ಸಪ್ಲೈ (59) ಶನಿವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಅಂತ್ಯಕ್ರಿಯೆಯು ಇಂದು(ಎ.19) ಲುಹರ್ ನಮಾಝ್ ವೇಳೆ ಉಳ್ಳಾಲ ಕೋಟೆಪುರ ಮಸೀದಿಯ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತದೇಹವು ಉಳ್ಳಾಲ ಕೋಟೆಪುರ 'ಸಿ' ರೋಡ್, ಸುಲ್ತಾನ್ ಬಸ್ ನಿಲ್ದಾಣದ ಬಳಿಯಿರುವ ಅವರ ಕುಟುಂಬದ ಮನೆಯಲ್ಲಿ ಇರಿಸಲಾಗಿದೆ.