×
Ad

ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿ

Update: 2024-08-28 18:33 IST

ಮುಲ್ಕಿ: ಇಲ್ಲಿನ ಕಾರಣೀಕದ ಬೀಡಾಗಿರುವ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಗಡಿ ಪ್ರಧಾನರೂ, ದೈವರಾಧನೆ ಕ್ಷೇತ್ರದ ಜ್ಞಾನ ಭಂಡಾರದ ಕೊಂಡಿಯಾಗಿದ್ದ ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿ (71) ಬುಧವಾರ ನಿಧನರಾದರು.

ಮೃತರು ಅತ್ತೂರು ಅರಸು ಕುಂಜಿರಾಯ ದೈವಸ್ಥಾನ, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನ, ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನ ಮತ್ತಿತರ ದೇವಸ್ಥಾನ ದೈವಸ್ಥಾನಗಳ ಬ್ರಹ್ಮಕಲಶೋತ್ಸವವಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಮತ್ತು ನಾಟಕ ಕಲಾವಿದರಾಗಿಯೂ ಇವರು ಗುರುತಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಗುರುವಾರ ಬೆಳಗ್ಗೆ 10:30ಕ್ಕೆ ಸ್ವಗೃಹ ಅತ್ತೂರು ಭಂಡಾರಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News