ಖ್ಯಾತ ವಿದ್ವಾಂಸ ಹಾಫಿಝ್ ಮಸ್ಊದ್ ಸಖಾಫಿ ಗುಡಲ್ಲೂರು ನಿಧನ
Update: 2025-02-23 12:15 IST
ಮಲಪ್ಪುರಂ | ಖ್ಯಾತ ವಿದ್ವಾಂಸ ಮತ್ತು ವಾಗ್ಮಿ ಹಾಫಿಝ್ ಮಸ್ಊದ್ ಸಖಾಫಿ ಗುಡಲ್ಲೂರು ನಿಧನರಾದರು. ಅವರು ಇಂದು ಬೆಳಿಗ್ಗೆ ಕಿಝಿಶ್ಶೇರಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಸ್ಊದ್ ಸಖಾಫಿ ಅವರು ಮಲಪ್ಪುರಂನ ಕಾವನೂರು ಬಳಿಯ ಪುಳಿಯಕೋಟ್ಟು ಎಂಬಲ್ಲಿ ನೆಲೆಸಿದ್ದರು.
ತಮ್ಮ ವಿಶಿಷ್ಟ ಶೈಲಿಯ ಭಾಷಣದ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿರುವ ಮಸ್ಊದ್ ಸಖಾಫಿ ಅವರು ಕೇರಳ , ಕರ್ನಾಟಕ ,ತಮಿಳುನಾಡು, ಸೇರಿದಂತೆ ಅನೇಕ ರಾಜ್ಯಗಳಲ್ಲಿ ಚಿರಪರಿಚಿತ ವ್ಯಕ್ತಿ.
ಇಂದು ಉಪ್ಪಿನಂಗಡಿ ಸಮೀಪದ ತುರ್ಕಳಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಮಸ್‌ಊದ್ ಸಖಾಫಿ ಅವರ ಭಾಷಣ ನಿಗದಿಯಾಗಿತ್ತು.