×
Ad

ಮರೂರು ನಾರಾಯಣ ಹೆಬ್ಬಾರ್

Update: 2023-11-15 19:19 IST

ಉಡುಪಿ, ನ.15: ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ, ಅರ್ಥಧಾರಿ, ಕೀರ್ತನಕಾರ, ಪ್ರವಚನಕಾರ, ಲೇಖಕ ಹೀಗೆ ಸಾಂಸ್ಕತಿಕ ರಂಗದಲ್ಲಿ ಬಹುಮುಖಿಯಾಗಿ ತೊಡಗಿಸಿಕೊಂಡಿದ್ದ ಮರೂರು ನಾರಾಯಣ ಹೆಬ್ಬಾರ್ (83) ಅಲ್ಪಕಾಲದ ಅಸೌಖ್ಯದಿಂದ ನ.15 ಬುಧವಾರ ನಿಧನರಾದರು.

ಅಂಬಲಪಾಡಿ ಲಕ್ಷ್ಮಿಜನಾರ್ದನ ಯಕ್ಷಗಾನ ಕಲಾಮಂಡಳಿಯ ಆನಂದ ಗಾಣಿಗ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು. ಹೆಬ್ಬಾರ್ ಪತ್ನಿ, ಪುತ್ರ, ಪುತ್ರಿ ಅಲ್ಲದೇ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News