ಬಂಟ್ವಾಳ : ನೇರಳಕಟ್ಟೆ ಸಮೀಪದ ಭಗವಂತಕೋಡಿ ನಿವಾಸಿ ಶುಕೂರ್ ಸಾಹೇಬ್ (58) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನರಾದರು.

ಆಟೋ ಚಾಲಕರಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಇವರು ಪರಿಸರದ ಸರ್ವ ಧರ್ಮೀಯರ ಪ್ರೀತಿ ಪಾತ್ರರಾಗಿದ್ದರು. ಶಾಲಾ ದಿನಗಳಲ್ಲಿ ಹಾಗೂ ಬಳಿಕ ಉತ್ತಮ ಕಬಡ್ಡಿ ಪಟುವಾಗಿ ಗುರುತಿಸಿಕೊಂಡಿದ್ದ ಇವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಸಂಖ್ಯೆಯ ಬಂಧು - ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor