×
Ad

ಬಿ. ಶಂಕರ ರಾವ್‌

Update: 2023-11-18 20:50 IST

ಬಂಟ್ವಾಳ : ಪಾಣೆಮಂಗಳೂರು ಎಸ್.ವಿ.ಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಬಿ. ಶಂಕರ ರಾವ್‌ ( 91 ) ಸ್ವ ಗೃಹದಲ್ಲಿ ಶನಿವಾರ ನಿಧನ ಹೊಂದಿದರು.

ಮೃತರು ಸದ್ರಿ ಸಂಸ್ಥೆಯಲ್ಲಿ ಮೂರು ದಶಕಗಳಿಗಿಂತಲೂ ಅಧಿಕ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಉತ್ತಮ ಶಿಕ್ಷಕರಾಗಿದ್ದ ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಅವರು ಪತ್ನಿ, ಬಂಧು ಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News