×
Ad

ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ

Update: 2023-12-19 18:09 IST

ಕೊಣಾಜೆ: ಕಣಂತೂರು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದ ಆಡಳಿತ ಮೊಕ್ತೇಸರರು, ನಾರ್ಯಗುತ್ತು ಮನೆತನದ ಗುರಿಕಾರರು ಆಗಿರುವ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ( 85) ಅವರು ಮಂಗಳವಾರ ನಿಧನರಾದರು.

ಮೃತರಿಗೆ ಮೂವರು ಪುತ್ರರಿದ್ದಾರೆ.

ಬಾಳೆಪುಣಿ ಗ್ರಾಮದ ಕಣಂತೂರಿನ ಶ್ರೀ ತೋಡಕುಕ್ಕಿನಾರ್ ಕ್ಷೇತ್ರದ ಗಡಿಪ್ರಧಾನರಾಗಿದ್ದುಕೊಂಡು ಬಳಿಕ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು.

ಇವರ ನಿಧನಕ್ಕೆ ಸಂಸದರಾದ ನಳಿನ್ ಕುಮಾರ್ ಕಟೀಲ್, ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಮೈಸೂರು‌ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷರಾದ ಸಂತೋಷ್ ಬೋಳಿಯಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಣ ಪ್ರಶಾಂತ್ ಕಾಜವ, ಶಾರದಾ ಗಣಪತಿ ವಿದ್ಯಾಸಂಸ್ಥೆಯ ಸಂಚಾಲಕ ರಾಜಾರಾಮ ಭಟ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News